Job Description: * ಇತ್ತೀಚಿಗೆ ಭಾರತದ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್ ಕೆ ಸಿಂಗ್ ಹಾಗೂ ಮಾಲ್ಡೀವ್ಸ್‌ನ ಪರಿಸರ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನ ಸಚಿವ ಅಮಿನಾಥ್ ಶೌನಾ ಅವರು ಭಾರತ ಮತ್ತು ಮಾಲ್ಡೀವ್ಸ್ ಉಭಯ ದೇಶಗಳ ನಡುವೆ ನವೀಕರಿಸಬಹುದಾದ ಶಕ್ತಿಯನ್ನು ವರ್ಗಾಯಿಸುವ ಉದ್ದೇಶದಿಂದ ಸಂವಹನ ಅಂತರ್ಸಂಪರ್ಕವನ್ನು ಸ್ಥಾಪಿಸಲು ಒಪ್ಪಿಗೆಯನ್ನು ನೀಡಿದ್ದಾರೆ. * ಭಾರತವು 2030 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವ ಮಾಲ್ಡೀವ್ಸ್ ಸರ್ಕಾರದ ಸಂಕಲ್ಪವನ್ನ ಮಾತುಕತೆಯನ್ನು ನಡೆಸಿದ್ದಾರೆ. ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ (OSOWOG) ಅಡಿಯಲ್ಲಿ ಪ್ರಸರಣ ಅಂತರ್ಸಂಪರ್ಕದಲ್ಲಿ ಹಾಗೂ ಇನ್ನೊಂದು ಶಕ್ತಿ ಸಹಕಾರದ ಕುರಿತಾದ ಸಭೆಯಲ್ಲಿ ಎರಡು ತಿಳುವಳಿಕೆ(MoU)ಗಳನ್ನು ಪ್ರಸ್ತಾಪಿಸಲಾಯಿತು. * ಮಾಲ್ಡೀವ್ಸ್‌ನ ಶಕ್ತಿ ಪರಿವರ್ತನೆ ಕಾರ್ಯಕ್ರಮಕ್ಕೆ ಅನುಕೂಲವಾಗು ನಿಟ್ಟಿನಲ್ಲಿ ನವೀಕರಿಸಬಹುದಾದ ವಿದ್ಯುತ್ ವರ್ಗಾವಣೆಯ ಉದ್ದೇಶದ ಅಡಿಯಲ್ಲಿ ಪ್ರಸರಣ ಅಂತರ್ಸಂಪರ್ಕವನ್ನು ಪ್ರಸ್ತಾಪಿಸಲಾಗಿದೆ. ಈ MOU ನ ಅಡಿಯಲ್ಲಿ, ಯೋಜನೆಯ ತಾಂತ್ರಿಕ ಕಾರ್ಯಸಾಧ್ಯತೆಯನ್ನು ನಿರ್ವಹಿಸಲು ಭಾರತೀಯ ತಾಂತ್ರಿಕ ತಂಡವು ಮಾಲ್ಡೀವ್ಸ್‌ಗೆ ಭೇಟಿ ನೀಡಲಿದೆ. ಹಾಗೂ ಭಾರತ ಹಾಗೂ ಮಾಲ್ಡೀವ್ಸ್‌ನ ಏಜೆನ್ಸಿಗಳು ಜಂಟಿಯಾಗಿ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಿವೆ ಎಂದಿದ್ದಾರೆ.