Job Description: * ರೋಪ್‌ವೇಗಳ ಮೂಲಕ ಮೊದಲ ಹಾಗೂ ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶ ರಾಜ್ಯದಲ್ಲಿ ರೋಪ್‌ವೇಗಳ ನಿರ್ಮಾಣಕ್ಕಾಗಿ ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (NHLML) ನಡುವೆ ತಿಳುವಳಿಕೆ ಪತ್ರ (MoU)ಗೆ ಸಹಿ ಹಾಕಲಾಗಿದೆ. * ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ರೋಪ್‌ವೇ ಯೋಜನೆಗಳು ಒಟ್ಟು 57.1 ಕಿಲೋಮೀಟರ್ ಉದ್ದವನ್ನು ಹೊಂದಿರಲಿದೆ. ಈ ಯೋಜನೆಗೆ 3,232 ಕೋಟಿ ರೂ. ರೋಪ್‌ವೇ ಯೋಜನೆಗಳು ಪ್ರವಾಸಿಗರಿಗೆ ಅನನ್ಯ, ಪರಿಸರ ಸ್ನೇಹಿ, ರಮಣೀಯ ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ನೀಡಲಿದೆ ಎಂದಿದ್ದಾರೆ. * ಇದೀಗ ಹಿಮಾಚಲ ಪ್ರದೇಶದಲ್ಲಿ '07' ರೋಪ್‌ವೇ ನಿರ್ಮಾಣವಾಗಲಿವೆ. * ಈ ಯೋಜನೆಯನ್ನು 2022-23 ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ ಎಂದಿದ್ದಾರೆ. ಪ್ರಸ್ತುತ ದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ರಾಷ್ಟ್ರೀಯ ರೋಪ್‌ವೇಸ್ ಅಭಿವೃದ್ಧಿ 'ಪರ್ವತಮಾಲಾ' ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆ ಮೂಲಕ ರಾಜ್ಯದಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಪ್ರಸ್ತುತ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ (MORTH)ವು ಈ ಯೋಜನೆಯನ್ನು ಜಾರಿಗೊಳಿಸುವ ನೋಡಲ್ ಸಚಿವಾಲಯವಾಗಿದೆ.