Job Description: * ಇತ್ತೀಚಿಗೆ ಕೇಂದ್ರ ಸಚಿವ ಸಂಪುಟವು ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿಯನ್ನು 2024 ರ ಡಿಸೆಂಬರ್ ವರೆಗೆ ಮುಂದುವರಿಸಲು ಅನುಮೋದನೆ ನೀಡಿದೆ. ಈ ಯೋಜನೆಯ ವಿಸ್ತರಣೆಯ ಬೀದಿ ಬದಿ ವ್ಯಾಪಾರಿಗಳಿಗೆ ಖುಷಿಯ ವಿಚಾರವಾಗಿದೆ. * ಈ ಯೋಜನೆಯ ಮಾಹಿತಿಯನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ, ಇದರ ಜೊತೆಗೆ ಖಾರಿಫ್ ಋತುವಿನಲ್ಲಿ ಫಾಸ್ಫಾಟಿಕ್ ಹಾಗೂ ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ ದರಗಳನ್ನು ಸಚಿವ ಸಂಪುಟವು ಅನುಮೋದಿಸಿದೆ. * 2021 ರಲ್ಲಿ DAP ರಸಗೊಬ್ಬರವು ಪ್ರತಿ ಚೀಲಕ್ಕೆ 512 ರೂ. ಪ್ರತಿ DAP ಚೀಲಕ್ಕೆ 2500 ರೂ.ಗಳ ಸಬ್ಸಿಡಿ ಒದಗಿಸಲಾಗುತ್ತದೆ. ಭಾರತ ಸರ್ಕಾರವು ಖಾರಿಫ್ ಬೆಳೆಗೆ ಪಿ & ಕೆ ರಸಗೊಬ್ಬರಗಳ ಸಬ್ಸಿಡಿಯಾಗಿ 60,939 ಕೋಟಿ ರೂ.ಗಳನ್ನು ವೆಚ್ಚವನ್ನು ಭರಿಸಲಿದೆ ಎಂದಿದ್ದಾರೆ. * ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (PM SVANIdhi) ಯೋಜನೆಯನ್ನು ಆರಂಭಿಸಿದೆ, ಈ ಯೋಜನೆಯು ಬೀದಿ ವ್ಯಾಪಾರಿಗಳಿಗೆ ಸಾಲವನ್ನು ನೀಡುವುದರ ಮೂಲಕ ಅವರಿಗೆ ಸಬಲೀಕರಣಗೊಳಿಸುವುದಕ್ಕಾಗಿ ಹಾಗೂ ಅವರ ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಉನ್ನತಿಗಾಗಿ ಸಹಾಯಕಾರಿಯಾಗಲಿದೆ ಎಂದಿದ್ದಾರೆ. ಈ ಯೋಜನೆಯು ಸುಮಾರು 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಒಂದು ವರ್ಷದ ಅವಧಿಯ INR 10,000/- ವರೆಗಿನ ಮೇಲಾಧಾರ ಮುಕ್ತ ವರ್ಕಿಂಗ್ ಕ್ಯಾಪಿಟಲ್ ಸಾಲಗಳನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ. ಹಾಗೂ ಸುತ್ತಮುತ್ತಲಿನ ಪೆರಿ-ನಗರ/ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ನಗರ ಪ್ರದೇಶಗಳಲ್ಲಿ ತಮ್ಮ ವ್ಯವಹಾರಗಳನ್ನು ಪುನಆರಂಭಿಸಲು ಸಹಾಯ ಮಾಡಲಿದೆ ಎಂದಿದ್ದಾರೆ.