Job Description: * ಪ್ರತಿ ವರ್ಷವು ಏಪ್ರಿಲ್. 22 ರಂದು ವಿಶ್ವ ಭೂ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಆದರೆ ಇದೀಗ ಪ್ರತಿ ವರ್ಷ 24 ಬಿಲಿಯನ್ ಟನ್‍ ಫಲವತ್ತಾದ ಭೂಮಿ ಬರಡು ಭೂಮಿಯಾಗುತ್ತಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಇದೀಗ ಬರ ಹಾಗೂ ಮರುಭೂಮಿಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಅದರಲ್ಲಿಯು ಆಫ್ರಿಕಾದಲ್ಲಿ ಬರ ಹೆಚ್ಚಾಗಿದೆ. * ವಿಶ್ವಸಂಸ್ಥೆಯು ಕಳೆದ 25 ವರ್ಷಗಳ ಹಿಂದೆಯೇ ವಿಶ್ವ ಬರ ಮತ್ತು ಮರುಭೂಮೀಕರಣ ತಡೆ ದಿನಾಚರಣೆಯನ್ನು ಆರಂಭಿಸಿದೆ, ಈ ದಿನಾಚರಣೆಯ ಮೂಲಕ ಫಲವತ್ತಾದ ಭೂಮಿ ಹಾಳಾಗುವದರ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದೆ. * ಈ ಹಿಂದೆ 1970 ರ ಏಪ್ರಿಲ್. 22 ರಂದು ಮೊದಲ ಬಾರಿಗೆ ವಿಶ್ವ ಭೂ ದಿನಾಚರಣೆಯನ್ನು ಆಚರಣೆ ಮಾಡಲಾಆಗಿದೆ, ಇದೀಗ 193 ಕ್ಕೂ ಅಧಿಕ ದೇಶಗಳಲ್ಲಿ 1 ಶತಕೋಟಿ ಜನರನ್ನು ಒಳಗೊಂಡಿರುವ ಜಾಗತಿಕವಾಗಿ ಸಂಘಟಿತವಾದ ವ್ಯಾಪಕ ಶ್ರೇಣಿಯ ಕಾರ್ಯಕ್ರಮಗಳನ್ನು ಒಳಗೊಂಡಿದೆ. * ಈ ಹಿಂದೆ 1969 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ, ಶಾಂತಿ ಕಾರ್ಯಕರ್ತ ಜಾನ್ ಮೆಕ್‌ಕಾನ್ನೆಲ್ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಈ ದಿನವನ್ನು ಪ್ರಸ್ತಾಪಿಸಿದ್ದಾರೆ, ನಂತರ ಇದನ್ನು 1970 ರ ಮಾರ್ಚ್. 21 ರಂದು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಮೊದಲ ದಿನದಂದು ಆಚರಿಸಲಾಗುತ್ತದೆ. ನಂತರ, ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಗೇಲಾರ್ಡ್ ನೆಲ್ಸನ್ ಅವರು 1970 ರ ಏಪ್ರಿಲ್. 22 ರಂದು ರಾಷ್ಟ್ರವ್ಯಾಪಿ ಪರಿಸರ ಬೋಧನೆಯನ್ನು ನಡೆಸುವ ಕಲ್ಪನೆಯ ಪ್ರಸ್ತಾಪವನ್ನು ತಿಳಿಸಿದರು. ಈ ಪ್ರಸ್ತಾವನೆಗೆ ನೆಲ್ಸನ್ ಹಾಗೂ ಹೇಯ್ಸ್ ಈವೆಂಟ್'ನ್ನು 'ಅರ್ಥ್ ಡೇ' ಎಂದು ಮರುನಾಮಕರಣ ಮಾಡಿದರು. * ಪ್ರಪಂಚದಾದ್ಯಂತ 100 ಮಿಲಿಯನ್ ಜನರು 2020 ರ ಭೂಮಿಯ ದಿನದಂದು 50ನೇ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದ್ದಾರೆ.