Job Description: * ಇತ್ತೀಚಿಗೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೋಲಿಹ್ ಅವರು ಭಾರತ ವಿರೋಧಿ ಪ್ರತಿಭಟನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಇದೀಗ ಈ ಪ್ರತಿಭಟನೆಯು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ ಎಂದು ಮಾಲ್ಡೀವ್ಸ್ ಭದ್ರತಾ ಮಂಡಳಿ ಹೇಳಿದೆ ಎಂದು ಸುದ್ದಿವಾಹಿನಿ ವರದಿಯಾಗಿದೆ. * ಈ ಹಿಂದೆ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಪ್ರಾರಂಭಿಸಿರುವ "ಇಂಡಿಯಾ ಔಟ್" ಅಭಿಯಾನದ ಭಾಗವಾಗಿರುವ ಪ್ರತಿಭಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. * ಭಾರತವು ಮಾಲ್ಡೀವ್ಸ್ ದ್ವೀಪದಲ್ಲಿ ಮಿಲಿಟರಿ ನೆಲೆ ಹೊಂದಲು ಸಹಾಯ ಮಾಡಿಕೊಡಲಿದೆ ಎಂದು ಅಭಿಯಾನದಲ್ಲಿ ಆರೋಪಿಸಲಾಗಿದೆ ಎಂದು ವರದಿಯಾಗಿತ್ತು. ಇದೀಗ ಸೋಲಿಹ್ ಅವರು ಭಾರತ-ಮೊದಲು ಎಂಬ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. * ಇತ್ತೀಚಿಗೆ ಮಾಲ್ಡೀವ್ಸ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯು 'ಇಂಡಿಯಾ ಔಟ್' ಅಭಿಯಾನವನ್ನು 'ರಾಷ್ಟ್ರೀಯ ಭದ್ರತೆಗೆ ಬೆದರಿಕೆ' ಎಂದು ಕರೆಯಲಾಗಿದೆ ಎಂದು "ದಿ ಹಿಂದೂ" ಸುದ್ದಿವಾಹಿನಿ ಪ್ರಕಟಿಸಿದೆ.