Job Description: * ಪ್ರಮುಖ ಆನ್‍ಲೈನ್‍ ಮಾರುಕಟ್ಟೆಯಾಗಿರುವ 'ಫ್ಲಿಪ್ ಕಾರ್ಟ್' ಇದೀಗ ದೇಶದ ಅತಿದೊಡ್ಡ ಫುಲ್ ಫಿಲ್ಮೆಂಟ್ ಸೆಂಟರ್ ನ್ನು ಪಶ್ಚಿಮ ಬಂಗಾಳದ ಹರಿಂಗಟಾದಲ್ಲಿ ಆರಂಭಿಸಿದೆ. ಮಾರಾಟಗಾರರು ಕುಶಲಕರ್ಮಿಗಳು ಹಾಗೂ ಯುವ ಉತ್ಸಾಹಿಗಳಿಗೆ ದೊಡ್ಡ ಮಟ್ಟದ ಉದ್ಯಮಶೀಲತೆ ಹಾಗೂ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವ ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ. * ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳ ಯುವಜನರಿಗೆ 11,000 ಕ್ಕೂ ಅಧಿಕ ಉದ್ಯೋಗಾವಕಾಶ ಹಾಗೂ 20,000 ಕ್ಕೂ ಅಧಿಕ ಮಾರಾಟಗಾರರಿಗೆ ಬೆಂಬಲ ನೀಡುವ ತಂತ್ರಜ್ಞಾನ ಆಧಾರಿತ ಈ ಕೇಂದ್ರವನ್ನು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉದ್ಘಾಟಿಸಿದ್ದಾರೆ. * ಪ್ರಸ್ತುತ ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ಪ್ರದೇಶದ ಸಾವಿರಾರು ಮಾರಾಟಗಾರರನ್ನು ರಾಷ್ಟ್ರೀಯ ಮಾರುಕಟ್ಟೆ ವ್ಯಾಪ್ತಿಗೆ ತರುವ ಮೂಲಕ ಬಲವಾದ ಪೂರೈಕೆ ಸರಪಳಿ ಮೂಲಸೌಕರ್ಯಗಳ ಲಭ್ಯತೆಯೊಂದಿಗೆ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಸುಸ್ಥಿರವಾದ ಪೂರೈಕೆ ಜಾಲವನ್ನು ನಿರ್ಮಿಸಲು ಫ್ಲಿಪ್ ಕಾರ್ಟ್ ನ ಬದ್ಧತೆಗೆ ಪುರಾವೆಯಾಗಿ, ಹರಿಂಗಟಾ ಸೌಲಭ್ಯವನ್ನು ಇಂಡಿಯನ್ ಗ್ರೀನ್ ಬಿಲ್ಡಿಂಗ್ಸ್ ಕೌನ್ಸಿಲ್ ಯಿಂದ ಪ್ಲಾಟಿನಂ ರೇಟಿಂಗ್ ನ ಜೊತೆಗೆ ಪ್ರಮಾಣೀಕರಿಸಲ್ಪಟ್ಟಿದೆ. ಈ ರೀತಿಯ ಪ್ರಮಾಣಪತ್ರವನ್ನು ಪಡೆದ ದೇಶದ ಮೊದಲ ಇ-ಕಾಮರ್ಸ್ ಸೌಲಭ್ಯ ಇದಾಗಿದೆ. * ಇದೀಗ ಇ-ಕಾಮರ್ಸ್ ಪ್ರತಿಯೊಬ್ಬ ಭಾರತೀಯನನ್ನು ನಿಜವಾಗಿಯೂ ಸಂಪರ್ಕಿಸುವ ಶಕ್ತಿಯನ್ನು ಹೊಂದಿದೆ. ಲಕ್ಷಾಂತರ ಸಣ್ಣ ಹಾಗೂ ದೊಡ್ಡ ವ್ಯವಹಾರಗಳನ್ನು ಸಂಪರ್ಕಿಸಲು ಬಲವಾದ ಪೂರೈಕೆ ಜಾಲವು ಬೆನ್ನೆಲುಬಾಗಿದೆ ಎಂದಿದ್ದಾರೆ.