Job Description: * ಪಾಕಿಸ್ತಾನದ ನೂತನ ಪ್ರಧಾನಿ ಶಾಹಬಾಝ್ ಷರೀಫ್ ನೇತೃತ್ವದ ಸರ್ಕಾರವು ಇತ್ತೀಚಿಗೆ ಚೀನಾ ಬೆಂಬಲಿತ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ರದ್ದುಗೊಳಿಸಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ. ಈ ವಿಷಯವಾಗಿ ಹೇಳಿಕೆ ನೀಡಿರುವ ಸಚಿವ ಅಹಸಾನ್ ಇಕ್ಬಾಲ್ ಅವರು ಈ ಯೋಜನೆ ಅನಾವಶ್ಯಕವಾದ ಸಂಸ್ಥೆಯಾಗಿದೆ ಹಾಗೂ ಸಂಪನ್ಮೂಲಗಳು ವ್ಯರ್ಥವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. * ಅಲ್ಲದೆ ಮಹತ್ವಾಕಾಂಕ್ಷೆಯ ಪ್ರಾಂತೀಯ ಸಂಪರ್ಕ ಕಾರ್ಯಕ್ರಮದ ತ್ವರಿತ ಜಾರಿಗೆ ಅಡ್ಡಿಯಾಗಿದೆ. ಹೀಗಾಗಿ ಈ ಯೋಜನೆಯನ್ನು ರದ್ದುಗೊಳಿಸುವ ಪ್ರಕ್ರಿಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. * ಈ ಹಿಂದೆ 2019ರಲ್ಲಿ ಸುಗ್ರಿವಾಜ್ಞೆ ಮೂಲಕ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. * ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ (CPEC) ಯೋಜನೆಗಳ ಮೌಲ್ಯವು 2020 ರ ಹೊತ್ತಿಗೆ ಸುಮಾರು 62 ಶತಕೋಟಿ ಮೌಲ್ಯದ್ದಾಗಿದೆ. ಆಧುನಿಕ ಸಾರಿಗೆ ಜಾಲಗಳು, ಹಲವಾರು ಇಂಧನ ಯೋಜನೆಗಳು ಹಾಗೂ ಇನ್ನು ಅನೇಕ ವಿಶೇಷ ಆರ್ಥಿಕ ವಲಯಗಳ ನಿರ್ಮಾಣದ ಮೂಲಕ ಪಾಕಿಸ್ತಾನದ ಅಗತ್ಯವಿರುವ ಮೂಲಸೌಕರ್ಯವನ್ನು ತ್ವರಿತವಾಗಿ ನವೀಕರಿಸುವದು ಮತ್ತು ಆರ್ಥಿಕತೆಯನ್ನು ಬಲಪಡಿಸಲು CPEC ಉದ್ದೇಶಿಸಿದೆ. * ಈ ಹಿಂದೆ 2016 ರ ನವೆಂಬರ್. 13 ರಂದು ಚೀನಾ ದೇಶದ ಸರಕುಗಳನ್ನು ಆಫ್ರಿಕಾ ಹಾಗೂ ಪಶ್ಚಿಮ ಏಷ್ಯಾಕ್ಕೆ ಸಮುದ್ರದ ಸಾಗಣೆಗಾಗಿ ಗ್ವಾದರ್ ಬಂದರಿಗೆ ಭೂಪ್ರದೇಶಕ್ಕೆ ಸಾಗಿಸಿದಾಗ CPEC ಭಾಗಶಃ ಕಾರ್ಯಾಚರಣೆಯನ್ನು ಆರಂಭಿಸಿತ್ತು, ಹಾಗೆಯೇ ಪ್ರಮುಖ ವಿದ್ಯುತ್ ಯೋಜನೆಗಳನ್ನು 2017 ರ ಕೊನೆಯಲ್ಲಿ ನಿಯೋಜಿಸಲಾಯಿತು. 2021 ರ ವೇಳೆಗೆ ಪಾಕಿಸ್ತಾನದಲ್ಲಿ COVID-19 ಸಾಂಕ್ರಾಮಿಕ ಎಚ್ಚರಿಕೆಯ ನಂತರ CPEC ಗಾಗಿ ಎಲ್ಲಾ ಪ್ರಗತಿಯು ಕಾರ್ಮಿಕರ ಭದ್ರತಾ ಕಾಳಜಿ, ಹಾಗೂ ವಾಯುವ್ಯ-ಫ್ರಾಂಟಿಯರ್ ಪ್ರಾಂತ್ಯ ಹಾಗೂ ಬಲೂಚಿಸ್ತಾನ್‌ನಲ್ಲಿ ಜರುಗುತ್ತಿರುವ ಪ್ರತಿಭಟನೆಗಳಿಂದಾಗಿ ಸ್ಥಗಿತಗೊಂಡಿದೆ.