Job Description: * ಕೇಂದ್ರ ಸರ್ಕಾರ ಸಾರ್ವಜನಿಕ ಆಡಳಿತದಲ್ಲಿ ಉತ್ತಮ ಸೇವೆಯನ್ನು ನೀಡಿರುವದಕ್ಕಾಗಿ ನೀಡುವ 2021 ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕ ಸರ್ಕಾರದ 'ಸೇವಾಸಿಂಧು' ಪೋರ್ಟಲ್‌ ಭಾಜನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕ ವಿದ್ಯುನ್ಮಾನ ಸೇವಾ ವಿಭಾಗದ ನಿರ್ದೇಶಕಿಯಾಗಿರುವ ದೀಪ್ತಿ ಆದಿತ್ಯ ಕಾನಡೆ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. * ಇದೀಗ ಸೇವಾಸಿಂಧು ಪೋರ್ಟಲ್‌ ಗಳ ಮೂಲಕ 74 ಇಲಾಖೆಗಳ 789 ಸೇವೆಗಳನ್ನು ನೀಡಲಾಗುತ್ತಿದೆ. ಪ್ರತಿ ದಿನವೂ ಒಂದು ಲಕ್ಷಕ್ಕಿಂತ ಅಧಿಕ ಜನರು ಪೋರ್ಟಲ್‌ಗೆ ಭೇಟಿ ನೀಡಿ ಸೇವೆಯನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ. * 2018 ರಲ್ಲಿ ಆರಂಭವಾದ ಪೋರ್ಟಲ್ ಕಂದಾಯ, ಸಾರಿಗೆ ಹಾಗೂ ಇನ್ನಿತರ ಸರ್ಕಾರದ ಹಲವಾರು ಇಲಾಖೆಗಳಿಗೆ ಸಂಬಂಧಿಸಿರುವ 2 ಕೋಟಿಗಿಂತ ಅಧಿಕ ಸೇವೆಗಳನ್ನು ನೀಡಿದೆ. * ಈ ಸೇವಾ ಸಿಂಧು ನಾಗರಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸಲು ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ. ಸೇವಾ ಸಿಂಧುವನ್ನು ಕರ್ನಾಟಕ ಸರ್ಕಾರದ ವಿವಿಧ ಸೇವಾ ವಿತರಣಾ ಚಾನೆಲ್‌ಗಳು, ಗ್ರಾಮ ಒನ್, ಜನಸೇವಕ, ಕರ್ನಾಟಕ ಒನ್, ಬೆಂಗಳೂರು ಒನ್, CSCಯಂತಹ ನಾಗರಿಕ ಸೇವಾ ಕೇಂದ್ರಗಳೊಂದಿಗೆ ಸಂಯೋಜಿಸಲಾಗಿದೆ ಹಾಗೂ ಎಲ್ಲಾ ಇಲಾಖೆಯ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಗುರಿಯನ್ನು ಹೊಂದಿದೆ. ನಗದು ರಹಿತ, ಮುಖರಹಿತ ಅಷ್ಟೇ ಅಲ್ಲದೇ ಕಾಗದ ರಹಿತ ರೀತಿಯಲ್ಲಿ ಸರ್ಕಾರಿ ಸೇವೆಗಳನ್ನು ಸಾರ್ವಜನಿಕರಿಗೆ ನೀಡುವದು ಇದರ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ನಾಗರಿಕರಿಗೆ ವೆಚ್ಚ-ಪರಿಣಾಮಕಾರಿ, ಜವಾಬ್ದಾರಿಯುತ ಹಾಗೂ ಪಾರದರ್ಶಕ ಸರ್ಕಾರಿ ಸೇವೆಗಳನ್ನು ನೀಡುವ ಒಂದು ಯೋಜನೆಯಾಗಿದೆ.