Job Description: * ರಷ್ಯಾ ನಡೆಸುತ್ತಿರುವ ಯುದ್ಧದಿಂದಾಗಿ ಯೂಕ್ರೇನ್ ಸಂಪೂರ್ಣ ಭಸ್ಮವಾಗಿದೆ, ಪಾರಂಪರಿಕ ಸ್ಥಾನ ಪಡೆದುಕೊಂಡಿದೆ, ಹಾಗೂ ಅಲ್ಲಿನ ಹಲವು ಐತಿಹಾಸಿಕ ಸ್ಥಳಗಳು ನಾಮಾವಶೇಷಗೊಂಡಿವೆ ಎಂದು ಯುನೆಸ್ಕೋ ತಿಳಿಸಿದೆ. * ಪ್ರಸ್ತುತ ಉಕ್ರೇನಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪಾರಂಪರೆಯ 100 ಸ್ಥಳಗಳು ಸಂಪೂರ್ಣ ನಾಶವಾಗಿವೆ ಎಂದು ವರದಿ ಮಾಡಿದೆ. ಹಾಗೆಯೇ '08' ಧರ್ಮಗಳನ್ನು ಸಾರುವ ಎಲ್ಲಾ ಪಾರಂಪರಿಕ ತಾಣವು ಯೂಕ್ರೇನ್ನಲ್ಲಿದ್ದವು ಇದೀಗ ಯಾವ ಸ್ಥಳಗಳು ಪಾರಂಪರಿಕ ತಾಣಗಳಾಗಿ ಉಳಿದಿಲ್ಲ ಎಂದು ವರದಿಯಾಗಿದೆ. * ಉಪಗ್ರಹಗಳ ಮೂಲಕ ಸದ್ಯದ ಉಕ್ರೇನಿನ ಎಲ್ಲಾ ಪರಿಸ್ಥಿತಿಗಳ ಬಗ್ಗೆ ಮಗಿತ್ತಿಯನ್ನು ಕಲೆಹಾಕಿದೆ. ಹಾಗೆಯೇ ಪಾರಂಪರಿಕ ತಾಣಗಳನ್ನು ರಕ್ಷಿಸುವ ಬಗ್ಗೆ ಈ ಹಿಂದೆ ಮಾರ್ಚ್. 17 ರಂದು ಯುನೆಸ್ಕೋ ರಷ್ಯಾ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ. ಫೆಬ್ರುವರಿ.24 ರಿಂದ ನಿರಂತರವಾಗಿ ರಷ್ಯಾ ರಾಷ್ಟ್ರವು ಉಕ್ರೇನಿನ ಮೇಲೆ ಯುದ್ಧ ನಡೆಸುತ್ತಿದೆ. * ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ವಿಶ್ವಸಂಸ್ಥೆಯ (UN) ವಿಶೇಷ ಸಂಸ್ಥೆಯಾಗಿದೆ. ವಿಶ್ವಶಾಂತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಹಾಗೂ ಶಿಕ್ಷಣ, ಕಲೆ, ವಿಜ್ಞಾನ ಮತ್ತು ಸಂಸ್ಕೃತಿಯಲ್ಲಿ ಅಂತರಾಷ್ಟ್ರೀಯ ಸಹಕಾರದ ಮೂಲಕ ಭದ್ರತೆ. ಇದೀಗ ಈ ಸಂಸ್ಥೆಯು 193 ಸದಸ್ಯ ರಾಷ್ಟ್ರಗಳು ಹಾಗೂ 11 ಸಹವರ್ತಿ ಸದಸ್ಯರನ್ನು ಹೊಂದಿದೆ. * ಈ ಸಂಸ್ಥೆಯು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ವರ್ಲ್ಡ್ ಹೆರಿಟೇಜ್ ಸೆಂಟರ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ, UNESCO 53 ಪ್ರಾದೇಶಿಕ ಕ್ಷೇತ್ರ ಕಛೇರಿಗಳನ್ನು ಹೊಂದಿದೆ ಹಾಗೂ 199 ರಾಷ್ಟ್ರೀಯ ಆಯೋಗಗಳನ್ನು ಹೊಂದಿದೆ. * UNESCO ನ್ನು 1945 ರಲ್ಲಿ ಲೀಗ್ ಆಫ್ ನೇಷನ್ಸ್ ನ ಬೌದ್ಧಿಕ ಸಹಕಾರದ ಅಂತಾರಾಷ್ಟ್ರೀಯ ಸಮಿತಿಯ ಉತ್ತರಾಧಿಕಾರಿಯಾಗಿ ಸ್ಥಾಪಿಸಲಾಗಿದೆ.