Job Description: * ಪ್ರಸ್ತುತ ನಿವೃತ್ತಿ ಹೊಂದಿದ ಪಿಂಚಣಿದಾರರು ಹಾಗೂ ಹಿರಿಯ ಉದ್ಯೋಗಿಗಳು ತಮ್ಮ ಪಿಂಚಣಿಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳಿಗಾಗಿ ಸರ್ಕಾರಿ ಇಲಾಖೆಗಳಿಗೆ ಅಲೆಯುವದನ್ನು ತಪ್ಪಿಸಲು ಇದೀಗ ಕೇಂದ್ರ ಸರ್ಕಾರವು 'ಏಕ ಗವಾಕ್ಷಿ' ಪೋರ್ಟಲ್ ಪರಿಚಯಿಸುವುದಾಗಿ ಘೋಷಣೆ ಮಾಡಿದೆ. * ಪಿಂಚಣಿದಾರರು ಹಾಗೂ ನಿವೃತ್ತ ಹಿರಿಯ ನಾಗರಿಕರಿಗೆ ಸಹಾಯ ಮಾಡುವ 'ಏಕ ಗವಾಕ್ಷಿ' ಪೋರ್ಟಲ್ ಸ್ಥಾಪಿಸುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಘೋಷಿಸಿದ್ದಾರೆ. * ಈ ಪೋರ್ಟಲ್ ದೇಶಾದ್ಯಂತ ಪಿಂಚಣಿದಾರರು ಹಾಗೂ ಅವರ ಸಹವರ್ತಿಗಳ ಜೊತೆಗೆ ನಿರಂತರ ಸಂಪರ್ಕವನ್ನ ಹೊಂದಲು ಸಹಾಯ ಮಾಡಲಿದೆ, ಅಷ್ಟೇ ಅಲ್ಲದೇ ತ್ವರಿತ ಪ್ರತಿಕ್ರಿಯೆಗಾಗಿ ಪಿಂಚಣಿದಾರರ ಸಲಹೆಗಳು ಹಾಗೂ ದೂರುಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. * ಇದೀಗ ಪಿಂಚಣಿದಾರರ ಎಲ್ಲಾ ಸಮಸ್ಯೆಗಳನ್ನ ಒಂದೇ ಸೂರಿನಡಿಯಲ್ಲಿ ಡಿಜಿಟಲ್ ಮೂಲಕ ಪರಿಹರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುಲಾಗುತ್ತದೆ, ಹಾಗೂ ಇದು ಸಾಮಾನ್ಯ ಪಿಂಚಣಿ ಪೋರ್ಟಲ್‌ನ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ. ಈ ಪೋರ್ಟಲ್'ನ ಮೂಲಕ ಪಿಂಚಣಿ ಬಾಕಿಯನ್ನ ಸಂಸ್ಕರಿಸಲು, ಮಂಜೂರು ಅಥವಾ ವಿತರಿಸಲು ಜವಾಬ್ದಾರರಾಗಿರುವ ಎಲ್ಲಾ ಸಚಿವಾಲಯಗಳನ್ನ ಈ ಡಿಜಿಟಲ್‌ ಪೋರ್ಟಾಲ್'ಗೆ ಲಿಂಕ್ ಮಾಡಲಾಗಿದೆ ಎಂದಿದ್ದಾರೆ. * ಪ್ರಸ್ತುತ ಪಿಂಚಣಿದಾರರು ಮತ್ತು ನೋಡಲ್ ಅಧಿಕಾರಿಗಳು, ವ್ಯವಸ್ಥೆಯಲ್ಲಿ ವಿಲೇವಾರಿಯಾಗುವವರೆಗೆ ಆನ್ಲೈನ್ ದೂರಿನ ಸ್ಥಿತಿಯನ್ನು ಪರೀಕ್ಷಿಸಕೊಳ್ಳಬಹುದಾಗಿದೆ ಎಂದಿದ್ದಾರೆ.