Job Description: * ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನವನ್ನು 2022-26 ರವರೆಗೆ 5,911 ಕೋಟಿ ರೂ.ಗಳ ವೆಚ್ಚದಲ್ಲಿ ಮುಂದುವರಿಸಲು ಅನುಮೋದನೆಯನ್ನು ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ. * ಕೇಂದ್ರ ಸರ್ಕಾರದ ಈ ಯೋಜನೆಗಾಗಿ ಒಟ್ಟು ಹಣಕಾಸು ವೆಚ್ಚದ ಪೈಕಿ ಕೇಂದ್ರವು 3,700 ಕೋಟಿ ರೂ.ಗಳು ಹಾಗೂ ರಾಜ್ಯದ ಪಾಲು 2,211 ಕೋಟಿ ರೂ.ಗಳಾಗಿರಲಿದೆ ಎಂದು ತಿಳಿಸಿದ್ದಾರೆ. * ಇದೀಗ ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಇದೇ 2022 ರ ಏಪ್ರಿಲ್. 01 ರಿಂದ 2026 ರ ಮಾರ್ಚ್. 31 ರವರೆಗೆ ಆರ್ಜಿಎಸ್‌ಎಯ ಪರಿಷ್ಕೃತ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆಯನ್ನು ನೀಡಲಾಗಿದೆ ಎಂದಿದ್ದಾರೆ. * ಈ ಯೋಜನೆಯ ಮೂಲಕ ಲಭ್ಯವಿರುವ ಸಂಪನ್ಮೂಲಗಳ ಗರಿಷ್ಠ ಬಳಕೆಯ ಮೇಲೆ ಗಮನ ಹರಿಸುವ ಮೂಲಕ ಸ್ಥಳೀಯ ಆಡಳಿತದ ಮೂಲಕ ಎಸ್ಡಿಜಿಗಳನ್ನು ತಲುಪಿಸಲು ಆಡಳಿತ ಸಾಮರ್ಥ್ಯಗಳನ್ನು ಹೆಚ್ಚಿಸಲು ದೇಶಾದ್ಯಂತದ ಸಾಂಪ್ರದಾಯಿಕ ಸಂಸ್ಥೆಗಳು ಸೇರಿದಂತೆ 2.78 ಲಕ್ಷಕ್ಕೂ ಅಧಿಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಆರ್ಜಿಎಸ್‌ಎಯ ಅನುಮೋದಿತ ಯೋಜನೆಯು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. * ಈ ಯೋಜನೆಯ ಮೂಲಕ ಹಳ್ಳಿಗಳಲ್ಲಿ ಬಡತನ ಮುಕ್ತ ಆರೋಗ್ಯಕರ ಗ್ರಾಮ, ಮಕ್ಕಳ ಸ್ನೇಹಿ ಗ್ರಾಮ, ನೀರಿನ ಸಮರ್ಪಕ ಗ್ರಾಮ, ಸ್ವಚ್ಛ ಹಾಗೂ ಹಸಿರು ಗ್ರಾಮ, ಗ್ರಾಮದಲ್ಲಿ ಸ್ವಾವಲಂಬಿ ಮೂಲಸೌಕರ್ಯ ಕಲ್ಪಿಸುವ ಸುರಕ್ಷಿತ ಗ್ರಾಮ, ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.