Job Description: * ಪ್ರಸ್ತುತ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲಾ ಪಂಚಾಯಿತಿಯು 3 ನೇ ಬಾರಿಗೆ ಅತ್ಯುತ್ತಮ ಜಿಲ್ಲಾ ಪಂಚಾಯಿತಿ ಗೌರವ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆ ಜಿಲ್ಲಾ ಪಂಚಾಯಿತಿಯ ಅತ್ಯುತ್ತಮ ಸಾಧನೆಗಾಗಿ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. * ಪ್ರಸ್ತುತ ತಿರುವನಂತಪುರಂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸುರೇಶ್‌ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ಈ ಜಿಲ್ಲಾ ಪಂಚಾಯಿತಿಯ ಹಲವಾರು ಯೋಜನೆಗಳ ಮೂಲಕ ಕಿಡ್ನಿ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆಗಾಗಿ ಆಸ್ವಾಸ್ ಯೋಜನೆ ಮತ್ತು ಬಡವರಿಗೆ ಉಚಿತ ಆಹಾರ ನೀಡುವ ಯೋಜನೆ ಹಾಗೂ ದೈಹಿಕ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದಂತಹ ಉತ್ತಮ ಯೋಜನೆಗಳನ್ನು ಕಲ್ಪಿಸಲಾಗಿದೆ ಎಂದಿದ್ದಾರೆ. * ತಿರುವನಂತಪುರಂ ಜಿಲ್ಲಾ ಪಂಚಾಯಿತಿಯು 2020-21 ನೇ ಹಣಕಾಸು ವರ್ಷದಲ್ಲಿ ಸಾಮಾನ್ಯ ವರ್ಗದಲ್ಲಿ ಶೇ. 99, ವಿಶೇಷ ಉಪ ಯೋಜನೆ ವರ್ಗದಲ್ಲಿ ಶೇ. 98 ರಷ್ಟು ಹಾಗೂ ಪರಿಶಿಷ್ಟ ಪಂಗಡಗಳ ಉಪ ಯೋಜನೆ ವರ್ಗದಲ್ಲಿ ಶೇ.92 ರಷ್ಟು ಬಳಸಿಕೊಂಡು ಜನ ಸಾಮಾನ್ಯರಿಗೆ ಸಹಾಯ ಮಾಡಲಾಗಿದೆ ಎಂದಿದ್ದಾರೆ. ಹಾಗೆಯೇ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ಗಳನ್ನು ಸ್ಥಾಪಿಸಲಾಗಿದೆ ಅವುಗಳಿಗೆ ಅಗತ್ಯ ಔಷಧಿ, ಸಲಕರಣೆಗಳನ್ನು ನೀಡಲಾಗಿದೆ, ಅಲ್ಲಿನ ರೋಗಿಗಳಿಗೆ ಉತ್ತಮ ಗುಣ ಮಟ್ಟದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಈ ಎಲ್ಲ ಕಾರ್ಯಗಳನ್ನು ಗಮನಿಸಿ ಅತ್ಯುತ್ತಮ ಸಾಧನೆಗಾಗಿ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.