Job Description: * ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವದೆಹಲಿಯಲ್ಲಿ 2022 ಏಪ್ರಿಲ್. 14 ರಂದು ಪ್ರಧಾನಮಂತ್ರಿ ಸಂಗ್ರಹಾಲಯದ ಉದ್ಘಾಟಣೆ ನೆರವೇರಿಸಿದ್ದಾರೆ. ಈ ಪ್ರಧಾನಮಂತ್ರಿ ಸಂಗ್ರಹಾಲಯ ಭಾರತದ ಪ್ರಧಾನ ಮಂತ್ರಿಗಳ ಕೊಡುಗೆಗಳ ಬಗ್ಗೆ ಮಾಹಿತಿನೀಡಲಿದೆ, ಹಾಗೂ ಉತ್ತಮ ಕಾರ್ಯಗಳ ಬಗ್ಗೆ ಪ್ರದರ್ಶಿಸಲಿದೆ ಎಂದಿದ್ದಾರೆ. * ಪ್ರಧಾನಿ ಮೋದಿ ಅವರು ಈ ಪ್ರಧಾನ ಮಂತ್ರಿ ಸಂಗ್ರಹಾಲಯದಲ್ಲಿ ಮೊದಲ ಟಿಕೆಟ್ ಖರೀದಿಸಿ ವೀಕ್ಷಣೆ ಮಾಡಿದರು. ಈ ವಸ್ತುಸಂಗ್ರಹಾಲಯವನ್ನು ಅಂಬೇಡ್ಕರ್ ಜಯಂತಿಯಂದು ಉದ್ಘಾಟಿಸಲಾಗಿದೆ, ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಗೌರವವನ್ನು ಒದಗಿಸಿದ್ದಾರೆ. * ಈ ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯದ ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿಸಿದರೆ 100 ರೂ. ಆಫ್‌ಲೈನ್ ಮೂಲಕ ಖರೀದಿಸಿದರೆ 110 ರೂ. ಆಗಲಿದೆ ಎಂದಿದ್ದಾರೆ. ವಿದೇಶಿಯರಿಗೆ 750 ರೂ. 5 ರಿಂದ 12 ವರ್ಷದೊಳಗಿನ ಮಕ್ಕಳು ಸಂಗ್ರಹಾಲಯಕ್ಕೆ ಭೇಟಿ ನೀಡುವವರಿಗೆ ಪ್ರತಿ ಟಿಕೆಟ್‌ಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹಾಗೂ ಕಾಲೇಜುಗಳು, ಶಾಲೆಗಳು ಬುಕ್ಕಿಂಗ್ ಮಾಡಿದರೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಶೇಕಡಾ 25 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ ಎಂದಿದ್ದಾರೆ. * ಈ ಸಂಗ್ರಹಾಲಯವನ್ನು ತೀನ್ ಮೂರ್ತಿ ಭವನದಲ್ಲಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಗ್ರಂಥಾಲಯದ ಸಮೀಪದಲ್ಲಿ ನಿರ್ಮಿಸಲಾಗಿದೆ. ಈ ಮ್ಯೂಸಿಯಂ 43 ಗ್ಯಾಲರಿಗಳನ್ನು ಒಳಗೊಂಡಿದೆ. ಈ ವಸ್ತುಸಂಗ್ರಹಾಲಯವು ದೇಶದ ಮಾಜಿ ಪ್ರಧಾನ ಮಂತ್ರಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರದರ್ಶಿಸಲಿದೆ ಎಂದಿದ್ದಾರೆ. ಹಾಗೆಯೇ ಈ ವಸ್ತು ಸಂಗ್ರಹಾಲಯದ ಲೋಗೋದಲ್ಲಿ ಪ್ರಜಾಪ್ರಭುತ್ವ ಹಾಗೂ ರಾಷ್ಟ್ರವನ್ನು ಸಂಕೇತಿಸುವ ಧರ್ಮ ಚಕ್ರವನ್ನು ಹಿಡಿದಿರುವ ಭಾರತೀಯ ಜನರ ಕೈಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.