Job Description: * ತೆಲಂಗಾಣ ಸರ್ಕಾರವು ರಾಜ್ಯದ ರೈತರಿಂದ ಭತ್ತವನ್ನು ಸಂಗ್ರಹಿಸಲು ಆರಂಭಿಸಿದೆ. ಈ ಖರೀದಿಯ ಮಾಹಿತಿಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಘೋಷಣೆ ಮಾಡಿದ್ದಾರೆ. * ಪ್ರಸ್ತುತ ವರ್ಷದಲ್ಲಿ ಸುಮಾರು 65 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ತೆಲಂಗಾಣ ರಾಜ್ಯ ಸರ್ಕಾರ ಖರೀದಿಸಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ರಾಜ್ಯದ ಖರೀದಿ ಕೇಂದ್ರಗಳಿಗೆ ಬೇರೆ ರಾಜ್ಯಗಳಿಂದ ಭತ್ತ ಆಮದು ಮಾಡಿಕೊಳ್ಳುವದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಿದೆ ಎಂದಿದ್ದಾರೆ. * ಪ್ರಸ್ತುತ ರಾಜ್ಯ ಸರ್ಕಾರವು ತನ್ನ ರಾಜ್ಯದಲ್ಲಿನ ಭತ್ತವನ್ನು ಕನಿಷ್ಠ ಬೆಂಬಲ ಬೆಲೆಗೆ (MSP) ಖರೀದಿಸಲಿದೆ ಎಂದು ತಿಳಿಸಿದ್ದಾರೆ. * ತೆಲಂಗಾಣ ರಾಜ್ಯದಲ್ಲಿ ಹಲವು ವರ್ಷಗಳಿಂದ ಭತ್ತದ ಉತ್ಪಾದನೆಯು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ, ಹಾಗೂ ನೀರಾವರಿಗಾಗಿ ಹೇರಳವಾದ ನೀರಿನ ಲಭ್ಯತೆ, ನಿರಂತರ ವಿದ್ಯುತ್ ಸರಬರಾಜು ಹಾಗೂ ರೈತ ಬಂಧು ಕಲ್ಯಾಣ ಯೋಜನೆಗಳಿಂದಾಗಿ ಕಳೆದ ವರ್ಷದಲ್ಲಿನ ಖಾರಿಫ್ ಹಂಗಾಮಿನಲ್ಲಿ ಸುಮಾರು 10.6 ಮಿಲಿಯನ್ ಟನ್ ಭತ್ತವನ್ನು ರಾಜ್ಯದಲ್ಲಿ ಉತ್ಪಾದಿಸಲಾಗಿತ್ತು. ಆ ಸಮಯದಲ್ಲಿ ಕೇಂದ್ರ ಸರ್ಕಾರವು ಸಂಪೂರ್ಣ ಭತ್ತವನ್ನು ಖರೀದಿಸಲು ನಿರಾಕರಿಸಿತ್ತು, ಹಾಗೂ 6 ಮಿಲಿಯನ್ ಟನ್‌ ಭತ್ತವನ್ನು ಖರೀದಿಸಿತ್ತು. * ಇದೀಗ ತೆಲಂಗಾಣ ಸರ್ಕಾರವು ತೆಲಂಗಾಣದಲ್ಲಿ ಉತ್ಪಾದನೆಯಾಗುವ ಶೇ.100 ರಷ್ಟು ಭತ್ತವನ್ನು ಖರೀದಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.