Job Description: * ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ಗಾನಂದ ಅವರು ಪ್ರತಿಷ್ಠಿತ ರೇಕ್‌ಜಾವಿಕ್ (ಐಸ್‌ಲ್ಯಾಂಡ್) ಓಪನ್ ಚೆಸ್ ಟೂರ್ನಮೆಂಟ್‌ನಲ್ಲಿನ '09' ಸುತ್ತುಗಳಿಂದ 7.5 ಪಾಯಿಂಟ್‌ಗಳನ್ನು ಪಡೆದುಕೊಂಡು ಪ್ರಶಸ್ತಿಯನ್ನು ಜಯಿಸಿದ್ದಾರೆ. * ಯುವ ಗ್ರ್ಯಾಂಡ್‌ಮಾಸ್ಟರ್ ಪ್ರಗ್ಗಾನಂದ ಅವರು ಕೊನೆಯ ಸುತ್ತಿನಲ್ಲಿ ದೇಶವಾಸಿ ಜಿಎಂ ಡಿ ಗುಕೇಶ್ ಅವರನ್ನು ಸೋಲಿಸುವ ಮೂಲಕ ಏಕೈಕ ವಿಜೇತರಾಗಿದ್ದಾರೆ. ಅಧಿಕ ಶ್ರೇಯಾಂಕ ಪಡೆದಿರುವ ಭಾರತೀಯರಾಗಿದ್ದರೆ. ಕೊನೆಯ ಎರಡು ಸುತ್ತುಗಳಲ್ಲಿ ಫ್ರಾನ್ಸ್'ನ ಮ್ಯಾಥಿಯು ಕಾರ್ನೆಟ್ ಹಾಗೂ ಗುಕೇಶ್ ವಿರುದ್ಧ ಜಯ ಸಾಧಿಸಿದ್ದಾರೆ. * ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ಗಾನಂದ ಅವರು ಇತ್ತೀಚೆಗೆ ಆನ್‌ಲೈನ್ ಟೂರ್ನಮೆಂಟ್‌ನಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿದ್ದರು. * ನೆದರ್‌ಲ್ಯಾಂಡ್ಸ್ GM ಮ್ಯಾಕ್ಸ್ ವಾರ್ಮರ್‌ಡ್ಯಾಮ್ '07'ಅಂಕಗಳನ್ನು ಪಡೆದುಕೊಂಡು 2 ನೇ ಸ್ಥಾನವನ್ನು ಪಡೆದಿದ್ದಾರೆ. ಅಭಿಮನ್ಯು ಮಿಶ್ರಾ '07' ಪಾಯಿಂಟ್ಸ್ ಪಡೆದು 5 ನೇ ಸ್ಥಾನವನ್ನು ಪಡೆದಿದ್ದಾರೆ. * ಭಾರತೀಯರ ಪೈಕಿ ಐಎಂ ತಾನಿಯಾ ಸಚ್‌ದೇವ್ ಅವರು 6 ಅಂಕ ಪಡೆದುಕೊಂಡು 21ನೇ ಸ್ಥಾನದಲ್ಲಿದ್ದಾರೆ. ಹಾಗೂ ಜಿಎಂ ಬಿ ಆದಿಭಾನ್ 5.5 ಅಂಕಗಳನ್ನೂ ಗಳಿಸಿ 34ನೇ ಸ್ಥಾನ ಪಡೆದುಕೊಂಡಿದ್ದಾರೆ. * ರೇಕ್ಜಾವಿಕ್ ಓಪನ್ ವಾರ್ಷಿಕ ಚೆಸ್ ಪಂದ್ಯಾವಳಿಯಾಗಿದೆ, ಈ ಪಂದ್ಯಾವಳಿಗಳು ರಾಜಧಾನಿ ಐಸ್ಲ್ಯಾಂಡ್ನಲ್ಲಿ ನಡೆಯುತ್ತದೆ. ಈ ಪಂದ್ಯಾವಳಿಗಳನ್ನು 2008 ರವರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತಿತ್ತು, ಇದೀಗ ವಾರ್ಷಿಕವಾಗಿ ನಡೆಯುತ್ತದೆ. ಈ ಪಂದ್ಯಾವಳಿಗಳ ಮೊದಲ ಆವೃತ್ತಿಯನ್ನು 1964 ರಲ್ಲಿ ನಡೆಸಲಾಯಿತು ಹಾಗೂ ಮಿಖಾಯಿಲ್ ತಾಲ್ ಅವರು 13 ರಲ್ಲಿ 12.5 ಅಂಕಗಳನ್ನು ಪಡೆದುಕೊಂಡಿದ್ದರು. * ಈ ಪಂದ್ಯಾವಳಿಯನ್ನು ಪ್ರಸ್ತುತ ಸ್ವಿಸ್ ವ್ಯವಸ್ಥೆಯೊಂದಿಗೆ ಆಡಲಾಗುತ್ತದೆ, ಈ ಹಿಂದೆ 1964 ರಿಂದ 1980 ರವರೆಗೆ ಹಾಗೂ 1992 ರಲ್ಲಿ ಇದು ರೌಂಡ್-ರಾಬಿನ್ ಪಂದ್ಯಾವಳಿಯಾಗಿತ್ತು. ಮತ್ತೇ 2013 ರ ಆವೃತ್ತಿಯು ಜಿಬ್ರಾಲ್ಟರ್ ಚೆಸ್ ಫೆಸ್ಟಿವಲ್‌ನ ಹಿಂದೆ ಅಸೋಸಿಯೇಷನ್ ಆಫ್ ಚೆಸ್ ಪ್ರೊಫೆಷನಲ್ಸ್‌ನಿಂದ ವಿಶ್ವದ ವರ್ಷದ 2 ನೇ ಅತ್ಯುತ್ತಮ ಮುಕ್ತ ಪಂದ್ಯಾವಳಿ ಎಂದು ಆಯ್ಕೆಯಾಗಿದೆ.