Job Description: * ಇತ್ತೀಚಿಗೆ ಪ್ರಧಾನಿ ಮೋದಿ ಅವರು ಅಮೇರಿಕ ಅಧ್ಯಕ್ಷ ಜೋ ಬೈಡೆನ್ ಅವರೊಡನೆ ಮಾತುಕತೆ ನಡೆಸಿದ ಸಂಧರ್ಭದಲ್ಲಿ, ವಿಶ್ವ ವಾಣಿಜ್ಯ ಸಂಸ್ಥೆ(WTO) ಅನುಮತಿ ನೀಡಿದರೆ ಭಾರತವು ಜಗತ್ತಿಗೆ ಆಹಾರ ದಾಸ್ತಾನು ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. * ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ಅನೇಕ ಭಾಗಗಳಲ್ಲಿ ಆಹಾರ ದಾಸ್ತಾನು ಕ್ಷೀಣಿಸುತ್ತಿದೆ, ಹಾಗೆಯೇ ಜಗತ್ತು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದಿದ್ದಾರೆ. * ಕೋವಿಡ್-19 ಕಾಣಿಸಿಕೊಂಡ ನಂತರ ಭಾರತವು ಸರಿ ಸುಮಾರು 80 ಕೋಟಿ ರೂ. ಜನರಿಗೆ ಎರಡು ವರ್ಷಗಳಿಂದ ಉಚಿತ ಪಡಿತರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆ ಸಂಧರ್ಭದಲ್ಲಿ ಪೆಟ್ರೋಲ್, ಡಿಸೇಲ್ ಸೇರಿದಂತೆ ತೈಲ ಹಾಗೂ ರಸಗೊಬ್ಬರಗಳನ್ನು ಖರೀದಿಸುವುದು ಕಷ್ಟಕರವಾಗಿತ್ತು. ಹಾಗೆಯೇ ಜಗತ್ತು ಅನೇಕ ಸಮಸ್ಯೆಯನ್ನು ಎದುರಿಸುತ್ತಿದೆ. WTO ಅನುಮತಿ ನೀಡಿದರೆ, ಇಡೀ ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿಕೆಯನ್ನು ನೀಡಿದ್ದಾರೆ. * ವಿಶ್ವ ವ್ಯಾಪಾರ ಸಂಸ್ಥೆ (WTO) ರಾಷ್ಟ್ರಗಳ ನಡುವಿನ ಅಂತರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವ ಮತ್ತು ಸುಗಮಗೊಳಿಸುವ ಒಂದು ಅಂತರಸರ್ಕಾರಿ ಸಂಸ್ಥೆಯಾಗಿದೆ. ಇದನ್ನು ಅಂತರರಾಷ್ಟ್ರೀಯ ವ್ಯಾಪಾರವನ್ನು ನಿಯಂತ್ರಿಸುವ ನಿಯಮಗಳನ್ನು ಸ್ಥಾಪಿಸಲು, ಪರಿಷ್ಕರಿಸಲು ಮತ್ತು ಜಾರಿಗೊಳಿಸಲು ಸರ್ಕಾರಗಳು ಸಂಸ್ಥೆಯನ್ನು ಬಳಸಲಾಗುತ್ತದೆ. ಈ ಸಂಸ್ಥೆಯು ಅಧಿಕೃತವಾಗಿ 1995 ರ ಜನವರಿ 1 ರಂದು ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. WTO ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಯಾಗಿದ್ದು, 164 ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುತ್ತದೆ. ಜಾಗತಿಕ ವ್ಯಾಪಾರ ಮತ್ತು ಜಾಗತಿಕ GDP ಯ 98% ಕ್ಕಿಂತ ಹೆಚ್ಚಾಗಿದೆ.