Job Description: * ಸೀತಾರಾಂ ಯೆಚೂರಿ ಅವರು CPI(ಎಂ)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದಾರೆ. ಇದೀಗ ಇವರು 3ನೇ ಅವಧಿಗೆ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. * ಈ ಹಿಂದೆ 2015 ರಲ್ಲಿ ನಡೆದ ಪಕ್ಷದ 21 ನೇ ರಾಷ್ಟ್ರೀಯ ಸಮಾವೇಶದಲ್ಲಿ ಮೊದಲ ಬಾರಿಗೆ ಸೀತಾರಾಂ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಮತ್ತೇ ಇವರನ್ನು 2018 ರಲ್ಲಿ ಅವರು 2 ನೇ ಅವಧಿಗೆ ಆಯ್ಕೆ ಮಾಡಲಾಯಿತು. * ಇದೀಗ ಪಾಲಿಟ್ ಬ್ಯೂರೋ ಕೇಂದ್ರ ಸಮಿತಿ ಸಭೆಯಲ್ಲಿ ಸೀತಾರಾಂ ಯೆಚೂರಿ ಅವರನ್ನು 3ನೇ ಅವಧಿಗೆ ಮರು ಆಯ್ಕೆ ಮಾಡಿದೆ. * ಈ ಹಿಂದೆ 2005 ರಿಂದ 2015 ರ ವರೆಗೂ ಪ್ರಕಾಶ್‌ ಕಾರಟ್‌ ಕೂಡ ಎರಡು ಬಾರಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. * ಸೀತಾರಾಮ್ ಯೆಚೂರಿ ಅವರೊಬ್ಬ ಭಾರತೀಯ ರಾಜಕಾರಣಿ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ. ಇವರು ಭಾರತದ ಅತಿದೊಡ್ಡ ಕಮ್ಯುನಿಸ್ಟ್ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಾಲಿಟ್‌ಬ್ಯೂರೋ ಸದಸ್ಯರಾಗಿದ್ದಾರೆ. * ಯೆಚೂರಿ 1974 ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾಗೆ ಸೇರಿದರು. ಇವರು ಜೆಎನ್‌ಯುನಲ್ಲಿ ವಿದ್ಯಾರ್ಥಿಯಾಗಿದ್ದಾಗ 1975 ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧಿಸಲ್ಪಟ್ಟಿದ್ದರು. ಮತ್ತೇ ಇವರು 1977-78 ರಲ್ಲಿ '03' ಬಾರಿ JNU ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಮತ್ತೇ ಇವರು 1978 ರಲ್ಲಿ, ಯೆಚೂರಿ SFI ನ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು ಹಾಗೂ SFI ಯ ಅಖಿಲ ಭಾರತ ಅಧ್ಯಕ್ಷರಾದರು. ಅವರು ಕೇರಳ ಅಥವಾ ಬಂಗಾಳದವರಲ್ಲದ SFI ನ ಮೊದಲ ಅಧ್ಯಕ್ಷರಾಗಿದ್ದರು. ಮತ್ತೇ 1984 ರಲ್ಲಿ ಅವರು CPI(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದರು.