Job Description: * COVID-19 ಸಾಂಕ್ರಾಮಿಕ ಸಮಯದಲ್ಲಿ, ಶಿಕ್ಷಣ ಕ್ಷೇತ್ರವು ಭಾರೀ ಹೊಡೆತವನ್ನು ಅನುಭವಿಸಿದೆ. ಆನ್‌ಲೈನ್ ತರಗತಿಗಳನ್ನು ಪ್ರೋತ್ಸಾಹಿಸುವ ಸಂದರ್ಭದಲ್ಲಿ ಭಾರತ ಹಾಗೂ ಇನ್ನಿತರ ದೇಶಗಳು ಕಾಲೇಜುಗಳು ಹಾಗೂ ಶಾಲೆಗಳನ್ನು ಮುಚ್ಚಬೇಕಾಯಿತು. ಹಾಗೆಯೇ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಅಕ್ರಮಗಳು ಜರುಗಿವೆ ಮತ್ತು ಅದರ ಪರಿಣಾಮಗಳನ್ನು ವಿದ್ಯಾರ್ಥಿಗಳು ಅನುಭವಿಸಿದ್ದಾರೆ. * ಭಾರತದ ಕಲಿಕೆಯ ಬಡತನ ಶೇ.70 ಕ್ಕೆ ಏರಿಕೆ ಯಾಗಿದೆ ಎಂದು ವಿಶ್ವಬ್ಯಾಂಕ್ ಆತಂಕವನ್ನು ವ್ಯಕ್ತಪಡಿಸಿದೆ. ಈ ಹಿನ್ನಲೆಯಿಂದಾಗಿ ದೇಶದ ಶಿಕ್ಷಣ ಕ್ಷೇತ್ರವು ಹಾಳಾಗಿದೆ ಎಂದಿದೆ. * ಪ್ರಸ್ತುತ ವಿಶ್ವಬ್ಯಾಂಕ್‌ನ ಜಾಗತಿಕ ಶಿಕ್ಷಣ ನಿರ್ದೇಶಕ ಜೈಮ್ ಸಾವೇದ್ರಾ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. * 10 ವರ್ಷ ವಯಸ್ಸಿನ ಮಗುವಿಗೆ ಸರಳ ಪಠ್ಯವನ್ನು ಓದಲು ಅಸಮರ್ಥತವಾಗಿದೆ ಸದ್ಯದ ಪರಿಸ್ಥಿತಿ. ಜಗತ್ತಿನಾದ್ಯಂತ ಅನೇಕ ಮಕ್ಕಳು ಸರಿಯಾಗಿ ಓದುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಿಲ್ಲ ಎಂದು ಹೇಳಿಕೆ ನೀಡಿದೆ. ಕೋವಿಡ್-19 ಹಿನ್ನಲೆಯಿಂದಾಗಿ ಪ್ರಪಂಚದಾದ್ಯಂತ, 260 ಮಿಲಿಯನ್‌ಗಿಂತಲೂ ಅಧಿಕ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದು ತಿಳಿಸಿದೆ. ಕಲಿಕೆಯ ಬಡತನವನ್ನು ಮುಖ್ಯವಾಗಿ ಭಾರತ ಹಾಗೂ ಪ್ರಪಂಚದಾದ್ಯಂತ ಅಭಿವೃದ್ಧಿಶೀಲ ರಾಷ್ಟ್ರಗಳು ಅನುಭವಿಸುತ್ತಿವೆ. * ವಿಶ್ವಬ್ಯಾಂಕ್‌ನ 2019 EduAnalytics ವರದಿಯ ಪ್ರಕಾರ, ಭಾರತದಲ್ಲಿ ಪ್ರಾಥಮಿಕ ವಯಸ್ಸಿನ 55 ಪ್ರತಿಶತದಷ್ಟು ಮಕ್ಕಳು ಸರಿಯಾಗಿ ಓದಲು ಸಾಧ್ಯವಾಗುತಿಲ್ಲ ಎಂದು ತಿಳಿಸಿದೆ. ಅದರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ಸಮಸ್ಯೆಯು ಹೆಚ್ಚಾಗಿದೆ ಎಂದಿದ್ದಾರೆ.