Job Description: * ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರನ್ನು ಭಾರತವು 2023 ರಲ್ಲಿ ಆಯೋಜಿಸಲಿರುವ G20 ಶೃಂಗಸಭೆಗೆ ಮುಖ್ಯ ಸಂಯೋಜಕರಾಗಿ ನೇಮಿಸಲಾಗಿದೆ. * 2022 ರ ಏಪ್ರಿಲ್. 30 ರಂದು ಹರ್ಷವರ್ಧನ್ ಶ್ರಿಂಗ್ಲಾ ಅವರು ನಿವೃತ್ತರಾಗಲಿದ್ದಾರೆ, ಹಾಗೂ ಮೇ. 01 ರಿಂದ ಈ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರವು ಶೃಂಗಸಭೆಯನ್ನು ಆಯೋಜಿಸಲು ಈ ಪಾತ್ರವನ್ನು ಹೊಸದಾಗಿ ರಚಿಸಿದೆ. G20 ಶೆರ್ಪಾ ಭಾರತೀಯ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಆಗಿ ಉಳಿಯುತ್ತಾರೆ. * 2023 ರಲ್ಲಿ ಭಾರತದಲ್ಲಿ ನಡೆಯಲಿರುವ G20 ಶೃಂಗಸಭೆಯು ಇತ್ತೀಚಿನ ವರ್ಷಗಳಲ್ಲಿ ಆಯೋಜಿಸಲಾದ ದೇಶದ ಅತಿದೊಡ್ಡ ಬಹುಪಕ್ಷೀಯ ಕಾರ್ಯಕ್ರಮವಾಗಿದೆ. ಈ ಶೃಂಗಸಭೆಯು ರಾಷ್ಟ್ರದ ಶ್ರೀಮಂತ ಸಂಸ್ಕೃತಿ, ಮೂಲಸೌಕರ್ಯ, ಆತಿಥ್ಯ ಹಾಗೂ ವೈವಿಧ್ಯತೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ದೇಶಕ್ಕೆ ಅದ್ಭುತವಾದ ಅವಕಾಶ ಲಭಿಸಿದೆ. * ಹರ್ಷವರ್ಧನ್ ಶ್ರಿಂಗ್ಲಾ ಅವರು ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದರು, ಶ್ರಿಂಗ್ಲಾ ಅವರು ಭಾರತದ 33ನೇ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಇವರು ಥೈಲ್ಯಾಂಡ್‌ಗೆ ಭಾರತದ ರಾಯಭಾರಿಯಾಗಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಹಾಗೂ ಬಾಂಗ್ಲಾದೇಶದ ಹೈ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. * ಭಾರತ-ಬಾಂಗ್ಲಾದೇಶ ಸಂಬಂಧಗಳು ಹಾಗೂ ಭಾರತೀಯ ಡಯಾಸ್ಪೊರಾಗೆ ಸಂಬಂಧಪಟ್ಟಿರುವ ಪ್ರಬಂಧಗಳನ್ನು ಸಹ ಪ್ರಕಟಿಸಿದ್ದಾರೆ. ಇವರು ಈ ಹಿಂದೆ 1984 ರಲ್ಲಿ ವಿದೇಶಾಂಗ ಸೇವೆಗೆ ಸೇರಿ ಸುಮಾರು 35 ವರ್ಷಗಳ ವೃತ್ತಿಜೀವನವನ್ನು ಕಳೆದಿದ್ದಾರೆ.