Job Description: * ಬೌದ್ಧಿಕ ಆಸ್ತಿ ಹಕ್ಕುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಹಿನ್ನಲೆಯಿಂದಾಗಿ ದೇಶದಲ್ಲಿ 2021-22 ರಲ್ಲಿ ಒಟ್ಟು 66,440 ಪೇಟೆಂಟ್ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಮಾಹಿತಿ ನೀಡಿದೆ. * ಪೇಟೆಂಟ್ ಅರ್ಜಿ ಸಲ್ಲಿಕೆ ಸಂಖ್ಯೆಯು ಈ ಹಿಂದೆ 2014-15 ರಲ್ಲಿ 42,763 ಆಗಿತ್ತು. ಹಾಗೆಯೇ 2021-22 ರಲ್ಲಿ ದೇಶದಲ್ಲಿ 30,074 ಪೇಟೆಂಟ್‌ಗಳನ್ನು ನೀಡಲಾಗಿದೆ. ಅದರಂತೆಯೇ 2014-15 ರಲ್ಲಿ 5,978 ಪೇಟೆಂಟ್‌ಗಳನ್ನು ಮಾತ್ರ ಸಲ್ಲಿಸಲಾಗಿತ್ತು ಎಂದು ಸಚಿವಾಲಯ ಹೇಳಿದೆ. * ಈ ಹಿಂದೆ 2016ರಲ್ಲಿ ಪೇಟೆಂಟ್ ಅರ್ಜಿಯ ಪರಿಶೀಲನೆಗೆ ಒಟ್ಟಾರೆ 72 ತಿಂಗಳು ಕಾಲಾವಕಾಶವನ್ನು ತೆಗೆದುಕೊಳ್ಳಲಾಗುತ್ತಿತ್ತು. ಇದೀಗ ಪೇಟೆಂಟ್ ಅರ್ಜಿಯ ಪರಿಶೀಲನೆಯ ಅವಧಿ ಈಗ ಕಡಿಮೆಯಾಗಿದೆ, ಅದು '05' ರಿಂದ 23 ತಿಂಗಳಿಗೆ ಇಳಿಕೆಯಾಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ. * ಪೇಟೆಂಟ್ ಇದೊಂದು ರೀತಿಯ ಬೌದ್ಧಿಕ ಆಸ್ತಿಯಾಗಿದೆ, ಆವಿಷ್ಕಾರವನ್ನು ಸಕ್ರಿಯಗೊಳಿಸುವ ಬಹಿರಂಗಪಡಿಸುವಿಕೆಯನ್ನು ಪ್ರಕಟಿಸಲು ಬದಲಾಗಿ ಸೀಮಿತ ಅವಧಿಯವರೆಗೆ ಆವಿಷ್ಕಾರವನ್ನು ತಯಾರಿಸುವುದು, ಬಳಸುವುದು ಹಾಗೂ ಮಾರಾಟ ಮಾಡುವುದು ಹೊರಗಿಡುವ ಕಾನೂನುಬದ್ಧ ಹಕ್ಕನ್ನು ಇದು ತನ್ನ ಮಾಲೀಕರಿಗೆ ಒದಗಿಸುತ್ತದೆ. ಅನೇಕ ದೇಶಗಳಲ್ಲಿ ಪೇಟೆಂಟ್ ಹಕ್ಕುಗಳು ಖಾಸಗಿ ಕಾನೂನಿನ ಅಡಿಯಲ್ಲಿ ಬರುತ್ತವೆ ಮತ್ತು ಪೇಟೆಂಟ್ ಹೊಂದಿರುವವರು ತಮ್ಮ ಹಕ್ಕುಗಳನ್ನು ಜಾರಿಗೊಳಿಸಲು ಯಾವುದೇ ವ್ಯಕ್ತಿಯು ಪೇಟೆಂಟ್ ನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಮೊಕದ್ದಮೆ ಹೂಡಲು ಅವರಿಗೆ ಅವಕಾಶವನ್ನು ಒದಗಿಸಿಕೊಡುತ್ತದೆ.