Job Description: * ಭಾರತವು ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದರುವ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ನಿಂದ ಹೆಲಿನಾ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯನ್ನ ನಡೆಸಿದೆ. * ಈ ಕ್ಷಿಪಣಿಯನ್ನು ಇತ್ತೀಚಿಗೆ ಪರೀಕ್ಷಿಸಲಾಯಿಗಿದೆ, ಇದು ಸಿಮ್ಯುಲೇಟೆಡ್ ಟ್ಯಾಂಕ್ ಗುರಿಯನ್ನ ಯಶಸ್ವಿಯಾಗಿ ಹೊಡೆದಿದೆ' ಎಂದು DRDO ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಸ್ಥಳೀಯ ಎಎಲ್‌ಎಚ್ ಧ್ರುವ್ ಚಾಪರ್ನ ರೂಪಾಂತರಗಳಲ್ಲಿ ಸಜ್ಜುಗೊಳಿಸಲಾದ ಕ್ಷಿಪಣಿಯನ್ನು ಬಳಕೆದಾರರ ದೃಢೀಕರಣ ಪ್ರಯೋಗಗಳ ಭಾಗವಾಗಿ ಎತ್ತರದ ಶ್ರೇಣಿಗಳಲ್ಲಿ ಯಶಸ್ವಿಯಾಗಿ ಹಾರಿಸಲಾಗಿದೆ. * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆ (IAF) ಯ ವಿಜ್ಞಾನಿಗಳ ತಂಡವು ಜಂಟಿಯಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೆಲಿಕಾಪ್ಟರ್‌ನ ಯಶಸ್ವಿ ಹಾರಾಟ ಪರೀಕ್ಷೆಯನ್ನು ಉನ್ನತ-ಎತ್ತರದ ವ್ಯಾಪ್ತಿಯಲ್ಲಿ ನಡೆಸಲಾಗಿದೆ. ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ನಿಂದ ಹಾರಾಟದ ಪ್ರಯೋಗಗಳನ್ನು ನಡೆಸಲಾಯಿತು ಹಾಗೂ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು, ರಾಜಸ್ಥಾನದ ಪೋಖ್ರಾನ್ ಮರುಭೂಮಿ ಶ್ರೇಣಿಗಳಲ್ಲಿ ಸಿಮ್ಯುಲೇಟೆಡ್ ಟ್ಯಾಂಕ್ ಗುರಿಯನ್ನು ತೊಡಗಿಸಿಕೊಂಡಿದೆ. * ಹೆಲಿನಾ ವಿಶ್ವದ ಅತ್ಯಾಧುನಿಕ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ. ಕ್ಷಿಪಣಿಯು ಗರಿಷ್ಠ 7 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದನ್ನು ಹೈದರಾಬಾದ್‌ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (DRDL)ವು ಅಭಿವೃದ್ಧಿಪಡಿಸಿದೆ. * * ಪ್ರಸ್ತುತ DRDO ನ ಅಧ್ಯಕ್ಷ : ಡಾ ಜಿ ಸತೀಶ್ ರೆಡ್ಡಿ. DRDO ಪ್ರಧಾನ ಕಛೇರಿಯು ನವದೆಹಲಿಯಲ್ಲಿದೆ.