Job Description: * ಇತ್ತೀಚಿಗೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುತ್ತಿದೆ, ಈ ಹಿನ್ನಲೆಯಿಂದಾಗಿ US ರಾಷ್ಟ್ರವು ರಷ್ಯಾದೊಂದಿಗೆ ಪ್ರಮುಖ ಶಸ್ತ್ರಾಸ್ತ್ರ ವಹಿವಾಟುಗಳನ್ನು ನಡೆಸದಂತೆ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದೆ ಎಂದು US ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. * ಭಾರತ ಹಾಗೂ US ನ ರಕ್ಷಣಾ ವಿದೇಶಾಂಗ ಮಂತ್ರಿಗಳ ನಡುವಿನ 2+2 ಸಚಿವರ ಸಂವಾದದ ಮುಕ್ತಾಯದ ಬಳಿಕ ರಷ್ಯಾದೊಂದಿಗೆ ಪ್ರಮುಖ ಶಸ್ತ್ರಾಸ್ತ್ರ ವಹಿವಾಟುಗಳನ್ನು ನಡೆಸದಂತೆ ಮನವಿ ಮಾಡಿದೆ. * ಇದೀಗ US ರಷ್ಯಾದ ಶಸ್ತ್ರಾಸ್ತ್ರ ವ್ಯವಸ್ಥೆಗಳಿಗೆ ಪ್ರಮುಖ ಹೊಸ ವಹಿವಾಟುಗಳನ್ನು ತಪ್ಪಿಸಲು ನಾವು ಎಲ್ಲಾ ದೇಶಗಳನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ. S-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಿದೆ, CAATSA ಕಾನೂನಿನ ಅಡಿಯಲ್ಲಿ ಸಂಭವನೀಯ ನಿರ್ಬಂಧಗಳ ಬಗ್ಗೆ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ. * ಭಾರತ ಹಾಗೂ ರಷ್ಯಾ ನಡುವೆ ಮಿಲಿಟರಿ ಉಪಕರಣಗಳ ವ್ಯಾಪಾರದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿವೆ. ಇದೀಗ US ಭಾರತಕ್ಕೆ ಪಾಲುದಾರರಾಗಲು ಸಿದ್ಧವಾಗಿದ್ದೇವೆ ಎಂದು ಬ್ಲಿಂಕನ್ ಹೇಳಿಕೆ ನೀಡಿದ್ದಾರೆ. US ಭಾರತದೊಂದಿಗೆ ಮಿಲಿಟರಿ ಆಧುನೀಕರಣದ ಬಗ್ಗೆ ಸಕ್ರಿಯವಾಗಿ ಮಾತುಕತೆಯನ್ನು ನಡೆಸುತ್ತಿದೆ, ಹಾಗೂ ದೆಹಲಿಗೆ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಅಧಿಕವಾಗಿ ಲಭ್ಯವಾಗುವಂತೆ ಮಾಡಲು ನಾವು ಸಿದ್ಧವಾಗಿದ್ದೇವೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಭಾರತೀಯ ಉನ್ನತ ಅಧಿಕಾರಿಗಳೊಂದಿಗಿನ ಸಭೆಗಳ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. * ಭಾರತವು ಟ್ಯಾಂಕ್‌ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಸೇರಿದಂತೆ ಹಲವಾರು ರಷ್ಯಾದ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದೆ, ಹಾಗೆಯೇ ರಷ್ಯಾದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಗಳಿಗೆ ಸಹಿ ಹಾಕಿದೆ. ಪ್ರಸ್ತುತ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ, ಅಮೇರಿಕ ವಿರೋಧಿಗಳನ್ನು ನಿರ್ಬಂಧಗಳ ಕಾಯ್ದೆ (CAATSA) ಮೂಲಕ ಎದುರಿಸುವ ಬೆದರಿಕೆ, ಹಾಗೂ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ನಿರ್ಬಂಧಗಳಿಗೆ ಸಹಿ ಹಾಕಲು ಭಾರತ ನಿರಾಕರಿಸಿದೆ.