Job Description: * ಇತ್ತೀಚಿಗೆ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೊಲಅನುಭವಿಸಿದೆ. ಈ ಹಿನ್ನಲೆಯಿಂದಾಗಿ ಭಾರತೀಯ ಮಹಿಳಾ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಯಿತು. * ದಕ್ಷಿಣ ಆಫ್ರಿಕಾ ತಂಡವು ಭಾರತ ತಂಡದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿ ಮುಂದಿನ ಹಂತಕ್ಕೆ ತೆರಳಿದೆ. ಈ ಪಂದ್ಯದ ಹಂತದಲ್ಲಿ ಮಿಗ್ನಾನ್‌ ಡು ಪ್ರೀಜ್ ಬೌಂಡರಿ ಬಾರಿಸಿ ಮೂಲಕ ಆಫ್ರಿಕಾಗೆ ಗೆಲುವನ್ನು ತಂದು ಕೊಟ್ಟಿದ್ದಾರೆ. * ಈ ಪಂದ್ಯದಲ್ಲಿ ಭಾರತ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 274 ರನ್‌ ಗಳನ್ನೂ ಕಲೆಹಾಕಿತ್ತು. ಆದರೆ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 275 ರನ್‌ ಗಳನ್ನು ಬಾರಿಸಿ ಮುಂದಿನ ಹಂತಕ್ಕೆ ತೆರಳಿದೆ.