Job Description: * ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ದೇಶದ ಮೊದಲ ಲಘು ತೂಕದ ರೈಲಿಗೆ ಚಾಲನೆ ನೀಡಿದ್ದಾರೆ. * ಇತ್ತೀಚಿಗೆ ಮಹಾರಾಷ್ಟ್ರ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ ಅಧ್ಯಕ್ಷರಾದ ಶ್ರೀ ಮನೋಜ್ ಜೋಶಿ ಅವರು ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಸ್ಥಾವರದಲ್ಲಿ ಟಿಟಾಘರ್ ನಲ್ಲಿ ಸಿದ್ಧಪಡಿಸಲಾಗಿರುವ ಮೊದಲ ಲಘು ತೂಕದ ರೈಲಿಗೆ ಚಾಲನೆ ನೀಡಿದ್ದಾರೆ. * ಈ ಲಘು ತೂಕದ ರೈಲು ಮಹಾರಾಷ್ಟ್ರ ಮೆಟ್ರೋದ ಪುಣೆ ಯೋಜನೆಗಾಗಿ ಅಲ್ಯೂಮಿನಿಯಂ ಬಾಡಿಯಿಂದ ಸಿದ್ದ ಪಡಿಸಿರುವ ದೇಶದ ಮೊದಲ ಲಘು ರೈಲಾಗಿದೆ. * ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ಅವರು ರೈಲಿಗೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಈ ವಿಧದ ಹಗುರವಾದ ಅಲ್ಯೂಮಿನಿಯಂ ಬಾಡಿ ಟ್ರೈನ್'ನ್ನು ತಯಾರಿಸಲಾಗುತ್ತಿದೆ ಈ ಮಹಾ ಮೆಟ್ರೋ ಯೋಜನೆಗೆ ಬಳಕೆ ಮಾಡುತ್ತಿರುವುದು ಇದೊಂದು ಮಹತ್ವದ ಹೆಜ್ಜೆಯಾಗಿದೆ.