Job Description: * ಪ್ರಸ್ತುತ ಕೇಂದ್ರ ಸರ್ಕಾರವು ಅಣು ವಿದ್ಯುತ್‌ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ 'ಫ್ಲೀಟ್‌ ಮೋಡ್‌'ನಡ ಅಡಿಯಲ್ಲಿ 10 ಪರಮಾಣು ರಿಯಾಕ್ಟರ್‌ಗಳನ್ನು ನಿರ್ಮಿಸಲು ತೀರ್ಮಾನವನ್ನು ಕೈಗೊಂಡಿದೆ. ಮುಂಬರುವ '3' ವರ್ಷಗಳಲ್ಲಿ ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗುವದು ಎಂದು ಅಣುಶಕ್ತಿ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * ಪ್ತ್ರಸ್ತುತ 'ಫ್ಲೀಟ್‌ ಮೋಡ್‌' ಎಂದರೆ ಈ ರಿಯಾಕ್ಟರ್‌ಗಳ ನಿರ್ಮಾಣಕ್ಕೆ ತಗುಲುವ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಕಡಿಮೆ ಕಾಲಾವಕಾಶದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವು ಪ್ರಕ್ರಿಯೆ ಎಂದರ್ಥ. * ಇದೀಗ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಈ ರೀತಿಯ ಅಂದರೆ ಈ 'ಫ್ಲೀಟ್‌ ಮೋಡ್‌'ನ ಅಡಿಯಲ್ಲಿ ಪರಮಾಣು ವಿದ್ಯುತ್‌ ಸ್ಥಾವರಗಳ ನಿರ್ಮಾಣದ ಕಾರ್ಯವನ್ನು ಆರಂಭಗೊಂಡ '5' ವರ್ಷಗಳಲ್ಲಿ ಪೂರ್ಣಗೊಳಿಸಲಾಗುವದು ಎಂಬ ನಿರ್ಮಾಣದ ಕಾರ್ಯಕ್ಕೆ ಅನುಮೋದನೆಯನ್ನು ನೀಡಿದೆ. * ಕೇಂದ್ರ ಸಚಿವ ಸಂಪುಟವು ಈ ಹಿಂದೆ 2017 ರಲ್ಲಿ ಸುಮಾರು 1.05 ಲಕ್ಷ ಕೋಟಿ ವೆಚ್ಚದಲ್ಲಿ ದೇಶದ ಅನೇಕ ಪರಮಾಣು ಸ್ಥಾವರಗಳಲ್ಲಿ 700 MW ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಒಟ್ಟಾರೆ '10' ಘಟಕಗಳ ಸ್ಥಾಪನೆಗೆ ಸಮ್ಮತಿಯನ್ನು ನೀಡಿದೆ. ಅವುಗಳಲ್ಲಿ ಕೈಗಾದ 5 ಹಾಗೂ 6 ನೇ ಘಟಕಗಳ ನಿರ್ಮಾಣ ಕಾರ್ಯ 2023 ರಲ್ಲಿ ಪ್ರಾರಂಭವಾಗಿದೆ ಎಂದು ಅಣುಶಕ್ತಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಮೊದಲು ಹರಿಯಾಣ ರಾಜ್ಯದ ಗೋರಖ್‌ಪುರ ಪರಮಾಣು ಸ್ಥಾವರದಲ್ಲಿ '2' ಘಟಕಗಳ ನಿರ್ಮಾಣದ ಕಾರ್ಯವು ಪ್ರಾರಂಭವಾಗಲಿದೆ ಎಂದಿದ್ದಾರೆ. ಇವುಗಳ ಬಳಿಕ ಕೈಗಾ ಘಟಕಗಳ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ನಂತರದಲ್ಲಿ ಅಂದರೆ 2024 ರಲ್ಲಿ ರಾಜಸ್ಥಾನದ ಮಾಹಿ ಬಾನ್ಸ್‌ವಾಡಾ ಸ್ಥಾವರದಲ್ಲಿ 4 ಘಟಕಗಳು ಹಾಗೂ ಮಧ್ಯಪ್ರದೇಶದ ಚುಟಕಾ ಸ್ಥಾವರದಲ್ಲಿ 2 ಘಟಕಗಳ ನಿರ್ಮಾಣದ ಕಾರ್ಯವು ಪ್ರಾರಂಭವಾಗಲಿದೆ ಎಂದಿದ್ದಾರೆ.