Job Description: * ಇತ್ತೀಚಿಗೆ ಕೇಂದ್ರದ ಉಕ್ಕು ಖಾತೆ ಸಚಿವ ರಾಮ್‌ಚಂದ್ರ ಪ್ರಸಾದ್ ಸಿಂಗ್‌ ಅವರು ಹೇಳಿರುವ ಪ್ರಕಾರ ರಷ್ಯಾ ರಾಷ್ಟ್ರದಿಂದ ಖನಿಜಯುಕ್ತ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದನ್ನು ಭಾರತ ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ. * ಇದೀಗ ಭಾರತ ಸರ್ಕಾರವು ಉಕ್ಕು ಉತ್ಪಾದನೆಗೆ ಅಗತ್ಯವಿರುವ ಖನಿಜಯುಕ್ತ ಕಲ್ಲಿದ್ದಲಿನ ಆಮದು ಪ್ರಮಾಣವನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. * ಭಾರತವು ಇಲ್ಲಿಯವರೆಗೆ ಒಟ್ಟಾರೆಯಾಗಿ ಸರಿ ಸುಮಾರು 45 ಲಕ್ಷ ಟನ್‌ ಕಲ್ಲಿದ್ದಲು ಆಮದು ಮಾಡಿಕೊಂಡಿದೆ. ಆದರೆ ಈ ಕಲ್ಲಿದ್ದಲನ್ನು ಯಾವ ವೇಳೆಗೆ ಆಮದು ಮಾಡಿಕೊಂಡಿದೆ ಎಂಬ ಮಾಹಿತಿಯನ್ನು ನೀಡಿಲ್ಲ. * ಇತ್ತೀಚಿಗೆ ಉಕ್ರೇನ್‌ ನ ಮೇಲಿನ ರಷ್ಯಾ ದಾಳಿಯು ಹಿನ್ನೆಲೆಯಿಂದಾಗಿ ಜಪಾನ್‌ ಹಾಗೂ ಪಶ್ಚಿಮದ ಅನೇಕ ರಾಷ್ಟ್ರಗಳು ರಷ್ಯಾ ರಾಷ್ಟ್ರದ ಮೇಲೆ ನಿರ್ಬಂಧವನ್ನು ಹೇರಿವೆ. ಆದರೆ ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಪ್ರಸ್ತುತ ಈ ವರ್ಷ ಸುಮಾರು 10.6 ಲಕ್ಷ ಟನ್‌ ಕಲ್ಲಿದ್ದಲು ಆಮದು ಆಗಬೇಕಿತ್ತು ಆದರೆ ರಷ್ಯಾ ಹಾಗೂ ಉಕ್ರೇನ್ ರಾಷ್ಟ್ರಗಳ ನಡುವಿನ ಯುದ್ಧದ ಹಿನ್ನಲೆಯಿಂದಾಗಿ ಆಮದು ಸ್ಥಗಿತಗೊಂಡಿದೆ ಎಂದಿದ್ದಾರೆ. * ಪ್ರಸ್ತುತ ಭಾರತವು ರಷ್ಯಾದಿಂದ ಖನಿಜಯುಕ್ತ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿರುವ 6ನೇ ಅತಿದೊಡ್ಡ ರಾಷ್ಟ್ರವಾಗಿದೆ.