Job Description: * ಭಾರತದ ಖ್ಯಾತ ಷಟ್ಲರ್ ಪಿ.ವಿ. ಸಿಂಧು ಅವರು ಸ್ವಿಟ್ಜರ್ಲೆಂಡ್ ನ ಬಾಸೆಲ್‌ ನ ಸೇಂಟ್ ಜಾಕೋಬ್‌ ಶಲ್ಲೆ ಅರೇನಾದಲ್ಲಿ ಸ್ವಿಸ್ ಓಪನ್ 2022 ರ ಮಹಿಳಾ ಸಿಂಗಲ್ಸ್ ಕಿರೀಟವನ್ನು ಗೆದ್ದುಕೊಂಡಿದ್ದಾರೆ. * ಈ ಪ್ರಶಸ್ತಿಯು ಪಿ.ವಿ ಸಿಂಧುಗೆ ವರ್ಷದ 2 ನೇ ಸೂಪರ್ 300 ಪ್ರಶಸ್ತಿಯಾಗಿದೆ. ಈ ಹಿಂದೆ ಇವರು ಜನವರಿಯಲ್ಲಿ ಸೈಯದ್ ಮೋದಿ ಇಂಟರ್ನ್ಯಾಷನಲ್ ನ್ನು ಜಯಿಸಿಕೊಂಡಿದ್ದರು. * ವಿಶ್ವದ ನಂ.7 ಪಿವಿ ಸಿಂಧು ಅವರು ಸ್ವಿಟ್ಜರ್ಲೆಂಡ್'ನ ಬಾಸೆಲ್‌ನ ಸೇಂಟ್ ಜಾಕೋಬ್‌ಶಲ್ಲೆ'ನಲ್ಲಿ ನಡೆದಿರುವ ಫೈನಲ್‌ ಪಂದ್ಯದಲ್ಲಿ 4 ನೇ ಶ್ರೇಯಾಂಕದ ಬುಸಾನಾನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಸೋಲಿಸುವ ಮೂಲಕ ಸ್ವಿಸ್ ಓಪನ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. * ಈ ಗೆಲುವಿನ ಮೂಲಕ ಪಿ. ವಿ. ಸಿಂಧು ಅವರು ಥಾಯ್ ಆಟಗಾರ್ತಿ ವಿರುದ್ಧ 16-1 ಅಂತರದಲ್ಲಿ ಹೆಡ್ ಟು ಹೆಡ್ ದಾಖಲೆಯನ್ನು ಪಡೆದುಕೊಂಡಿದ್ದಾರೆ.