Job Description: * ಶ್ರೀಲಂಕಾದ ಹಳೆಯ ಹಾಗೂ ಮೊದಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇದೀಗ 54 ವರ್ಷಗಳ ಬಳಿಕ ಪುನಃ ಆರಂಭಗೊಂಡಿದೆ. * ಮಾಲ್ಡೀವ್ಸ್‌ನ ವಿಮಾನವು ಶ್ರೀಲಂಕಾದ ರತ್ಮಲಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಈ ವಿಮಾನವು ವಾರದಲ್ಲಿ '3' ದಿನಗಳು ಕಾಲ ಸಂಚರಿಸುತ್ತದೆ, ಹಾಗೂ ಮುಂದಿನ ದಿನಗಳಲ್ಲಿ '5' ದಿನಗಳ ವರೆಗೆ ವಿಸ್ತರಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಈ ವಿಮಾನವು 50 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. * ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದ ಬಳಿಕ ರತ್ಮಲಾನ ನಿಲ್ದಾಣವನ್ನು ದೇಶಿಯ ವಿಮಾನ ನಿಲ್ದಾಣವಾಗಿ ಬದಲಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ರತ್ಮಲಾನ ವಿಮಾನ ನಿಲ್ದಾಣವು ಈ ಹಿಂದೆ 1938 ರಲ್ಲಿ ಪ್ರಾರಂಭಗೊಂಡಿದೆ. ಈ ವಿಮಾನ ನಿಲ್ದಾಣವು ಶ್ರೀಲಂಕಾದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.