Job Description: * ವಿಶ್ವ ಮಹಿಳಾ ದಿನಾಚರಣೆ ಹಿನ್ನಲೆಯಿಂದಾಗಿ ಬೆಂಗಳೂರು-ಮೈಸೂರು ನಗರಗಳ ನಡುವೆ 'ರಾಜ್ಯರಾಣಿ ಎಕ್ಸ್ ಪ್ರೆಸ್' ಎಂಬ ರೈಲು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳಿಂದ ಸಂಚರಿಸಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರು ವಿಭಾಗದ ಮಹಿಳಾ ಸಿಬ್ಬಂದಿಗಳು ಈ ಬೆಂಗಳೂರು-ಮೈಸೂರು ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿ ಗಮನ ಸೆಳೆದಿದ್ದಾರೆ. * ಈ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲಿಗೆ ಮಹಿಳಾ ಪಾಯಿಂಟ್ಸ್ ಮ್ಯಾನ್ ಲೀಲಾವತಿ ಹಾಗೂ ಕವಿತಾ ಅವರು ಚಾಲನೆ ನೀಡಿದ್ದಾರೆ. ಇವರ ಜೊತೆಗೆ ಶ್ಯಾಮ್ ಸಿಂಗ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಕುಸುಮಾ ಹರಿಪ್ರಸಾದ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಹೀಗೆ ಹಲವು ಮಹಿಳಾ ಸಿಬ್ಬಂದಿಗಳಿದ್ದರು. ಪ್ರಸ್ತುತ ಈ ರೈಲನ್ನು ಅಶ್ವಿನಿಯರಸಿ, ಲೋಕೋ ಪೈಲಟ್ ಹಾಗೂ ಮೇಘಾ ಡ್ರಾಲಿ ಸತ್ಯಂ ಸಹಾಯಕ ಪೈಲಟ್ ಆಗಿ ಚಾಲನೆ ಮಾಡಿದ್ದಾರೆ. ಇವರ ಜೊತೆಗೆ ರಿಚಾ ಮಣಿ ತ್ರಿಪಾಠಿ ಅವರು ರೈಲ್ವೆ ಗಾರ್ಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.