Job Description: * ಪ್ರಸ್ತುತ ಭಾರತ ಹಾಗೂ ಜಪಾನ್‌ ರಾಷ್ಟ್ರಗಳ ನಡುವಿನ ಜಂಟಿ ಸಮರಾಭ್ಯಾಸವಾಗಿರುವ 'ಧರ್ಮ ಗಾರ್ಡಿಯನ್‌-2021' ರ 3 ನೇ ಆವೃತ್ತಿಯು ಬೆಳಗಾವಿಯಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ ನಡೆಯುತ್ತಿದೆ, ಈ ಸಮರಾಭ್ಯಾಸದಲ್ಲಿ ಯೋಧರು ಭಯೋತ್ಪಾದನೆ ನಿಗ್ರಹಗಳ ಬಗ್ಗೆ ಅಣುಕು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. * ಅರಣ್ಯ ಹಾಗೂ ನಗರಪ್ರದೇಶಗಳಲ್ಲಿ ಭಯೋತ್ಪಾದನೆ ನಿಗ್ರಹ ಚಟುವಟಿಕೆಗಳ ಕಾರ್ಯಾಚರಣೆಯನ್ನು ನಡೆಸಲು ಜಂಟಿ ತರಬೇತಿಯನ್ನು ಯೋಧರಿಗೆ ಫೆಬ್ರುವರಿ.27 ರಿಂದ ನೀಡಲಾಗುತ್ತಿದೆ. ಇದರ ಅಂಗವಾಗಿ '3' ದಿನಗಳ ಅಣಕು ಕಾರ್ಯಾಚರಣೆಯು ಪ್ರಾರಂಭವಾಗಿದೆ. ಸದ್ಯ ಜಾಗತಿಕ ಭಯೋತ್ಪಾದನೆಯು ಹೆಚ್ಚಾಗುತ್ತಿರುವ ಹಿನ್ನಲೆಯಿಂದಾಗಿ, ಉಭಯ ರಾಷ್ಟ್ರಗಳು ಎದುರಿಸುತ್ತಿರುವ ಭದ್ರತಾ ಸವಾಲುಗಳ ಹಿನ್ನೆಲೆಯಿಂದಾಗಿ ಈ ಸಮರಾಭ್ಯಾಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. * ಭಾರತೀಯ ಸೇನೆಯ 115 ಬ್ರಿಗೇಡ್‌ನ 40 ಯೋಧರು ಮತ್ತು ಜಪಾನ್‌ ಸೇನೆಯ 30-ಇನ್‌ಫೆಂಟ್ರಿ ರೆಜಿಮೆಂಟ್‌ನ 40 ಯೋಧರು ಜಂಟಿಯಾಗಿ ಈ ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದಾರೆ. ಈ ಯೋಧರ ಕಾರ್ಯಾಚರಣೆಯ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ. ಈ ಸಮರಾಭ್ಯಾಸದಲ್ಲಿ ತಂಡಗಳ ನಿಯೋಜನೆ, ಜವಾಬ್ದಾರಿ ಹಂಚಿಕೆ, ಹೆಲಿಕಾಪ್ಟರ್‌ ಬಳ್ಸಿಕೊಂಡು ಸ್ಥಳವನ್ನು ತಲುಪುವುದು, ನಕ್ಷೆಗಳು ಹಾಗೂ ತಂತ್ರಜ್ಞಾನದ ಬಳಕೆ ಮಾಡುವದನ್ನು ಇನ್ನು ಅನೇಕ ಸೈನಿಕರ ಕಾರ್ಯಗಳನ್ನು ಪ್ರದರ್ಶಿಸಲಾಯಿತು. * ಪ್ರಸ್ತುತ ಇಂಡೋ- ಟಿಬೆಟಿಯನ್‌ ಗಡಿ ಭದ್ರತಾ ಪಡೆಯ ಬೆಳಗಾವಿ ಜಿಲ್ಲೆಯಲ್ಲಿನ ಹಾಲಬಾವಿ ಹೊರವಲಯದಲ್ಲಿರುವ ತರಬೇತಿ ಕೇಂದ್ರ ಪ್ರದೇಶಕ್ಕೆ ಹೆಲಿಕಾಪ್ಟರ್‌ನಲ್ಲಿ 4 ಸುತ್ತುಗಳಲ್ಲಿ ಬಂದು ಇಳಿದಿರುವ ಭಾರತ- ಜಪಾನ್‌ ಯೋಧರು ಅಲ್ಲಿನ ಹಳ್ಳಿಯ ಮನೆಯಲ್ಲಿ ಉಗ್ರರ ವಶದಲ್ಲಿರುವ ಇಬ್ಬರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಕೈಗೊಂಡರು. ಎಂದು 36 ರ‍್ಯಾಪಿಡ್‌ ಜನರಲ್‌ ಆಫೀಸರ್‌ ಕಮಾಂಡಿಂಗ್ ಮೇಜರ್‌ ಜನರಲ್ ಭವನಿಶ್‌ಕುಮಾರ್ ಅವರು ನೀಡಿರುವ ಸಲಹೆ ಮೇರೆಗೆ ಯೋಧರು ಈ ಕಾರ್ಯಾಚರಣೆಯನ್ನು ನಡೆಸಿದರು. * ಭಾರತೀಯ ಸೇನೆ ಹಾಗೂ ಜಪಾನ್‌ ಸೇನೆ ನಡುವಿನ ರಕ್ಷಣಾ ಸಹಕಾರ ಮಟ್ಟವು ಹಾಗೂ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಈ ಸಮರಾಭ್ಯಾಸವನ್ನು ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.