Job Description: * ಇತ್ತೀಚಿಗೆ 2022 ರ ಮಾರ್ಚ್. 7 ರಂದು ರಷ್ಯಾ ರಾಷ್ಟ್ರವು ರಷ್ಯಾದ ವಿರುದ್ಧ ಸ್ನೇಹಿಯಲ್ಲದ ಕ್ರಮಗಳನ್ನು ಕೈಗೊಂಡಿರುವ ವಿದೇಶಿ ದೇಶಗಳು ಹಾಗೂ ಪ್ರಾಂತ್ಯಗಳ ಪಟ್ಟಿ ಮಾಡಿದೆ. * ಪ್ರಸ್ತುತ ಯುನೈಟೆಡ್ ಸ್ಟೇಟ್ಸ್(US), ಯುರೋಪಿಯನ್ ಯೂನಿಯನ್ (EU), ಯುನೈಟೆಡ್ ಕಿಂಗ್‌ಡಮ್, ಜಪಾನ್, ಕೆನಡಾ, ನಾರ್ವೆ, ಸಿಂಗಾಪುರ್, ದಕ್ಷಿಣ ಕೊರಿಯಾ, ಸ್ವಿಟ್ಜರ್ಲೆಂಡ್ ಹಾಗೂ ಉಕ್ರೇನ್ ಸದಸ್ಯ ರಾಷ್ಟ್ರಗಳು ರಷ್ಯಾ ಸ್ನೇಹಿಯಲ್ಲದ ದೇಶಗಳು ಹಾಗೂ ಪ್ರಾಂತ್ಯಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. * ಇತ್ತೀಚಿಗೆ ರಷ್ಯಾ ರಸ್ತವು ಉಕ್ರೇನ್ ಮೇಲೆ ಯುದ್ಧ ಆರಂಭಿಸಿರುವ ಹಿನ್ನಲೆಯಿಂದಾಗಿ ಅನೇಕ ದೇಶಗಳು ರಷ್ಯಾ ದೇಶದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಇದೀಗ ರಷ್ಯಾ ರಾಷ್ಟ್ರವು ನೀಡಿರುವ ಮಾಹಿತಿಯ ಪ್ರಕಾರ ಸ್ನೇಹಿಯಲ್ಲದ ದೇಶಗಳು ರಷ್ಯಾದ ಕಂಪನಿಗಳು ಮತ್ತು ನಾಗರಿಕರ ವಿರುದ್ಧ ಸ್ನೇಹಿಯಲ್ಲದ ಕ್ರಮಗಳನ್ನು ಜರುಗಿಸಿವೆ. * ಇದೀಗ ಈ ಪಟ್ಟಿಯ ಜೊತೆಗೆ ಅಧ್ಯಕ್ಷೀಯ ಆದೇಶವನ್ನು ಪ್ರಕಟಿಸಿದೆ, ಈ ಹಿನ್ನಲ್ಲೆಯಿಂದಾಗಿ ರಷ್ಯಾದ ನಾಗರಿಕರು ಹಾಗೂ ಕಂಪನಿಗಳ ವಿದೇಶಿ ವಿನಿಮಯ ಕಟ್ಟುಪಾಡುಗಳನ್ನು ಸ್ನೇಹಿಯಲ್ಲದ ದೇಶಗಳ ಪಟ್ಟಿಯಿಂದ ವಿದೇಶಿ ಸಾಲಗಾರರಿಗೆ ರಷ್ಯಾದ ಕರೆನ್ಸಿಯಲ್ಲಿ ಪಾವತಿಸಬೇಕು ಎಂದು ಆ ಪ್ರಕಟಣೆಯಲ್ಲಿದೆ. ಅಂತಹ ವಿದೇಶಿ ಪಾವತಿಗಳನ್ನು ಮಾಡಲು, ಸಾಲಗಾರರು ರಷ್ಯಾದ ಬ್ಯಾಂಕ್‌ನೊಂದಿಗೆ ವಿಶೇಷ ರೀತಿಯ ರೂಬಲ್ ಖಾತೆಯನ್ನು ತೆರೆಯಬೇಕು ಹಾಗೂ ಆ ದಿನದ ಅಧಿಕೃತ ವಿನಿಮಯ ದರದ ಆಧಾರದ ಮೇಲೆ ನೀಡಬೇಕಾದ ವಿದೇಶಿ ಕರೆನ್ಸಿ ಮೊತ್ತಕ್ಕೆ ಸಮಾನವಾದ ರೂಬಲ್ ನ್ನು ವರ್ಗಾವಣೆ ಮಾಡಬೇಕು ಎಂದಿದೆ. ಇದೊಂದು ವಿದೇಶಿ ಸಾಲಗಳ ಪಾವತಿಗೆ ತಾತ್ಕಾಲಿಕ ವ್ಯವಸ್ಥೆಯಾಗಿದೆ ಹಾಗೂ ತಿಂಗಳಿಗೆ 10 ಮಿಲಿಯನ್ ರೂಬಲ್ಸ್ ಗಳನ್ನೂ ಮೀರಿದ ಪಾವತಿಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದೆ. * ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧವು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ, ಈ ಯುದ್ಧದ ಕಾರಣಗಳಿಂದ 1.7 ಮಿಲಿಯನ್ ಜನರು ಉಕ್ರೇನ್‌ ದೇಶದಿಂದ ನೆರೆಯ ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ.