Job Description: * ಪ್ರತಿ ವರ್ಷ ಮಾರ್ಚ್. 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರ ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮಾಜಿಕ ಆರ್ಥಿಕ ಸಾಧನೆಗಳನ್ನು ಸ್ಮರಿಸಲು ಆಚರಣೆ ಮಾಡಲಾಗುತ್ತದೆ. ಹಾಗೂ ಈ ದಿನವು ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು, ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ತಿಳಿಸುತ್ತದೆ. ಇದೀಗ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರಪಂಚದಾದ್ಯಂತ ಸಾರ್ವಜನಿಕ ರಜಾದಿನವಾಗಿ ಆಚರಣೆ ಮಾಡಲಾಗುತ್ತದೆ. * ಅಂತರರಾಷ್ಟ್ರೀಯ ಮಹಿಳಾ ದಿನವು ನ್ಯೂಜಿಲೆಂಡ್‌ನಲ್ಲಿ ಆರಂಭವಾಗಿರುವ ಸಾರ್ವತ್ರಿಕ ಮಹಿಳಾ ಮತದಾನದ ಆಂದೋಲನದಿಂದ 20 ನೇ ಶತಮಾನದ ಆರಂಭದಲ್ಲಿ ಉತ್ತರ ಅಮೇರಿಕ ಹಾಗೂ ಯುರೋಪ್‌ನಲ್ಲಿ ಕಾರ್ಮಿಕ ಚಳುವಳಿಗಳಿಂದ ಹುಟ್ಟಿಕೊಂಡಿತು. ಈ ದಿನದ ಆರಂಭಿಕ ಆವೃತ್ತಿಯು ಈ ಹಿಂದೆ 1909 ರ ಫೆಬ್ರವರಿ. 28 ರಂದು ನ್ಯೂಯಾರ್ಕ್ ನಗರದಲ್ಲಿ ಸೋಷಿಯಲಿಸ್ಟ್ ಪಾರ್ಟಿ ಆಫ್ ಅಮೇರಿಕ ಆಯೋಜಿಸಿರುವ ದಿನವನ್ನು 'ಮಹಿಳಾ ದಿನ' ಎಂದು ಕರೆಯಲಾಗುತ್ತದೆ. ಈ ದಿನವು ಹಿಂದೆ 1910 ರ ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಜರ್ಮನ್ ಪ್ರತಿನಿಧಿಗಳು 'ವಿಶೇಷ ಮಹಿಳಾ ದಿನವನ್ನು ವಾರ್ಷಿಕವಾಗಿ ಆಚರಣೆ ಮಾಡಲು ಅವರನ್ನು ಪ್ರೇರೇಪಿಸಿದೆ. * 1917 ರಲ್ಲಿ ಸೋವಿಯತ್ ರಷ್ಯಾದಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆದ ನಂತರ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್. 8 ರಂದು ರಾಷ್ಟ್ರೀಯ ರಜಾದಿನ ಎಂದು ಪರಿಗಣಿಸಲಾಗಿದೆ. ಈ ದಿನವನ್ನು ಸಮಾಜವಾದಿ ಚಳುವಳಿ ಹಾಗೂ ಕಮ್ಯುನಿಸ್ಟ್ ದೇಶಗಳು ಈ ದಿನಾಂಕದಂದು ಆಚರಣೆ ಮಾಡುತ್ತವೆ. ಈ ಅಂತರರಾಷ್ಟ್ರೀಯ ಮಹಿಳಾ ದಿನವನ್ನು 1977 ರಲ್ಲಿ ಯುನೈಟೆಡ್ ನೇಷನ್ಸ್ ಅಳವಡಿಸಿಕೊಂಡ ಬಳಿಕ ನಂತರ ಮುಖ್ಯವಾಹಿನಿಯ ಜಾಗತಿಕ ರಜಾದಿನವಾಗಿದೆ. * UN ಒಂದು ನಿರ್ದಿಷ್ಟ ಸಮಸ್ಯೆ, ಅಭಿಯಾನ ಅಥವಾ ಮಹಿಳಾ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ರಜಾದಿನವನ್ನು ಆಚರಣೆ ಮಾಡುತ್ತವೆ. ಇದೀಗ ಪ್ರಪಂಚದ ಕೆಲವು ಭಾಗಗಳಲ್ಲಿ ಈ ದಿನವನ್ನು ತನ್ನ ರಾಜಕೀಯ ಮೂಲವನ್ನು ಬಿಂಬಿಸುತ್ತವೆ, ಇತರ ಪ್ರದೇಶಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಪಶ್ಚಿಮದಲ್ಲಿ ಅಧಿಕವಾಗಿ ಸಾಮಾಜಿಕ-ಸಾಂಸ್ಕೃತಿಕವಾಗಿದೆ ಹಾಗೂ ಹೆಣ್ತನದ ಆಚರಣೆಯ ಮೇಲೆ ಕೇಂದ್ರೀಕೃತವಾಗಿದೆ. * ವಿಶ್ವಸಂಸ್ಥೆಯ ಪ್ರಕಾರ 2022 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಧೇಯವ್ಯಾಕ್ಯವು 'ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ'. ಪ್ರಪಂಚದಾದ್ಯಂತದ ಮಹಿಳೆಯರು ಹಾಗೂ ಹುಡುಗಿಯರ ಕೊಡುಗೆಗಳನ್ನು ಈ ಧೇಯವ್ಯಾಕ್ಯವು ಗೌರವಿಸುತ್ತದೆ.