Job Description: * ಭಾರತೀಯ ಮಹಿಳಾ ಶೂಟಿಂಗ್ ತಂಡವು 25 ಮೀ. ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದೆ. ಈ ಪದಕ ಸೇರಿ ಭಾರತಕ್ಕೆ '3' ಚಿನ್ನದ ಪದಕ ಲಭಿಸಿವೆ. ಹಾಗೂ ಪುರುಷರ ತಂಡ ರಾಪಿಡ್ ಫೈರ್ ರೈಫಲ್ ಟೀಮ್ ಈವೆಂಟ್ ನಲ್ಲಿ ISSF ಶೂಟಿಂಗ್ ವರ್ಲ್ಡ್‌ನಲ್ಲಿ ಜರ್ಮನಿ ತಂಡದ ವಿರುದ್ಧ 7-17 ಅಂಕ ಪಡೆದುಕೊಂಡು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. * ಜೆಕ್ ಗಣರಾಜ್ಯವು ಇಂಡೋನೇಷ್ಯಾ ವಿರುದ್ಧ 16-0 ಅಂತರದಲ್ಲಿ ಗೆಲುವು ಸಾಧಿಸಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. * 2 ನೇ ಅರ್ಹತಾ ಹಂತದಲ್ಲಿ ಭಾರತ 568 ಅಂಕಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದೆ, ಹಾಗೂ ಜರ್ಮನಿ 567 ಅಂಕಗಳನ್ನು ಪಡೆದುಕೊಂಡು 2 ನೇ ಸ್ಥಾನದಲ್ಲಿದೆ. * ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ISSF) ರೈಫಲ್, ಪಿಸ್ತೂಲ್ ಹಾಗೂ ಶಾಟ್‌ಗನ್ ವಿಭಾಗಗಳಲ್ಲಿ ಒಲಿಂಪಿಕ್ ಶೂಟಿಂಗ್ ಈವೆಂಟ್‌ಗಳು ಹಾಗೂ ಹಲವಾರು ಒಲಂಪಿಕ್ ಅಲ್ಲದ ಶೂಟಿಂಗ್ ಕ್ರೀಡಾಕೂಟಗಳ ಆಡಳಿತ ಮಂಡಳಿಯಾಗಿದೆ. ISSF ನ ಚಟುವಟಿಕೆಗಳಲ್ಲಿ ಕ್ರೀಡೆಯ ನಿಯಂತ್ರಣ, ಒಲಂಪಿಕ್ ಅರ್ಹತೆಗಳು ಹಾಗೂ ISSF ವಿಶ್ವಕಪ್ ಸರಣಿ, ISSF ವಿಶ್ವಕಪ್ ಫೈನಲ್ಸ್, ISSF ಪ್ರತ್ಯೇಕ ವಿಶ್ವ ಚಾಂಪಿಯನ್‌ಶಿಪ್ ಶಾಟ್‌ಗನ್ ಈವೆಂಟ್‌ಗಳು ಹಾಗೂ ISSF ವಿಶ್ವ ಚಾಂಪಿಯನ್‌ಶಿಪ್'ಗಳಲ್ಲಿ ಎಲ್ಲಾ ಈವೆಂಟ್‌ಗಳನ್ನು ಒಳಗೊಂಡಿದೆ. * ಇದನ್ನು ಈ ಹಿಂದೆ 1907 ರಲ್ಲಿ ಇಂಟರ್ನ್ಯಾಷನಲ್ ಶೂಟಿಂಗ್ ಯೂನಿಯನ್ ಎಂದು ಸ್ಥಾಪನೆ ಮಾಡಲಾಗಿದೆ, ISSF ಅಂಗಸಂಸ್ಥೆಗಳು ಇಂದು ಆಫ್ರಿಕಾ, ಅಮೇರಿಕಾ, ಏಷ್ಯಾ, ಯುರೋಪ್ ಹಾಗೂ ಓಷಿಯಾನಿಯಾದಿಂದ 150 ಕ್ಕೂ ಅಧಿಕ ರಾಷ್ಟ್ರೀಯ ಶೂಟಿಂಗ್ ಫೆಡರೇಶನ್‌ಗಳು. ISSF ಪ್ರಧಾನ ಕಛೇರಿಯು ಜರ್ಮನಿಯ ಮ್ಯೂನಿಚ್‌ನಲ್ಲಿದೆ.