Job Description: * ಪ್ರಸ್ತುತ ಡೇವಿಸ್‌ ಕಪ್ ಟೆನಿಸ್‌'ನ ವಿಶ್ವ ಗುಂಪು 1 ರಲ್ಲಿ ಭಾರತಕ್ಕೆ ಸ್ಥಾನ, ಇದೀಗ ಭಾರತದ ರೋಹನ್ ಬೋಪಣ್ಣ- ದಿವಿಜ್ ಶರಣ್ ಜೋಡಿಯು ಡೇವಿಸ್‌ ಕಪ್ ಟೆನಿಸ್‌ ವಿಶ್ವ ಗುಂಪು ಒಂದರ ಪ್ಲೇ ಆಫ್‌ನಲ್ಲಿ ಡೆನ್ಮಾರ್ಕ್‌ ಜೋಡಿಯನ್ನು ಸೋಲಿಸಿ 3-0 ರ ಅಂತರದಿಂದ ಜಯ ಗಳಿಸಿ ವಿಶ್ವಗುಂಪು 1 ರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. * ಶರಣ್‌ ಮತ್ತು ಕನ್ನಡಿಗ ಬೋಪಣ್ಣ 2019 ರ ನಂತರ ಡೇವಿಸ್‌ ಕಪ್‌ನಲ್ಲಿ ಮೊದಲ ಪಂದ್ಯ ಆಡುತ್ತಿದ್ದಾರೆ, ಅದರಲ್ಲಿ ಡಬಲ್ಸ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ಫ್ರೆಡರಿಕ್ ನೆಲ್ಸನ್‌ ಹಾಗೂ ಮೈಕೆಲ್‌ ಟೋರ್ಪ್‌ಗಾರ್ಡ್‌ ಅವರನ್ನು ಸೋಲಿಸಿದ್ದಾರೆ. * ಸಿಂಗಲ್ಸ್ ಪಂದ್ಯಗಳಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಅವರು ಕ್ರಿಸ್ಟಿಯನ್ ಸಿಗ್ಸ್‌ಗಾರ್ಡ್‌ ಎದುರು ಹಾಗೂ ಯೂಕಿ ಭಾಂಬ್ರಿ ಮೈಕೆಲ್‌ ಟೋರ್ಪ್‌ಗಾರ್ಡ್‌ ವಿರುದ್ಧ ಜಯ ಸಾಧಿಸಿದ್ದಾರೆ. * ಡೇವಿಸ್ ಕಪ್ ಇದೊಂದು ಪುರುಷರ ಟೆನಿಸ್‌ನಲ್ಲಿ ಪ್ರಧಾನ ಅಂತಾರಾಷ್ಟ್ರೀಯ ತಂಡ ಪಂದ್ಯವಾಗಿದೆ. ಈ ಪಂದ್ಯವನ್ನು ಇಂಟರ್ನ್ಯಾಷನಲ್ ಟೆನಿಸ್ ಫೆಡರೇಶನ್ ಆಯೋಜಿಸುತ್ತದೆ, ಹಾಗೂ ನಾಕ್-ಔಟ್ ಮಾದರಿಯಲ್ಲಿ ಸ್ಪರ್ಧಾತ್ಮಕ ದೇಶಗಳ ತಂಡಗಳ ನಡುವೆ ವಾರ್ಷಿಕವಾಗಿ ನಡೆಸಲಾಗುತ್ತದೆ. ಈ ಪಂದ್ಯವನ್ನು ಸಂಘಟಕರು 'ವಿಶ್ವಕಪ್ ಆಫ್ ಟೆನಿಸ್' ಎಂದು ಬಣ್ಣಿಸಿದ್ದಾರೆ. ಹಾಗೂ ವಿಜೇತರನ್ನು ವಿಶ್ವ ಚಾಂಪಿಯನ್ ತಂಡ ಎಂದು ಕರೆಯುತ್ತಾರೆ. ಗ್ರೇಟ್ ಬ್ರಿಟನ್ ಹಾಗೂ ಯುನೈಟೆಡ್ ಸ್ಟೇಟ್ಸ್ ನಡುವಿನ ಸವಾಲಾಗಿ ಈ ಹಿಂದೆ 1900 ರಲ್ಲಿ ಸ್ಪರ್ಧೆಯುನ್ನು ಆರಂಭಿಸಲಾಗಿದೆ. ಈ ಕಪ್ 2016 ರ ವೇಳೆಗೆ ಸುಮಾರು 135 ರಾಷ್ಟ್ರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದವು. * ಈ ಪಂದ್ಯಾವಳಿಗಳಲ್ಲಿ ಅತ್ಯಂತ ಯಶಸ್ವಿ ದೇಶಗಳು ಯುನೈಟೆಡ್ ಸ್ಟೇಟ್ಸ್(us) ಸುಮಾರು 32 ಪ್ರಶಸ್ತಿಗಳನ್ನು ಜಯಿಸಿದೆ, ಮತ್ತು 29 ಬಾರಿ ರನ್ನರ್-ಅಪ್ ಆಗಿ ಹೊರ ಹೊಮ್ಮಿದೆ. ನಂತರ ಆಸ್ಟ್ರೇಲಿಯಾ ದೇಶವು ಸುಮಾರು 28 ಪ್ರಶಸ್ತಿಗಳನ್ನು ಜಯಿಸಿದೆ. 2021 ರಲ್ಲಿ ಕ್ರೊಯೇಷಿಯಾವನ್ನು ಸೋಲಿಸಿ 3 ನೇ ಪ್ರಶಸ್ತಿಯನ್ನು ಗೆದ್ದ ರಷ್ಯಾ ಪ್ರಸ್ತುತ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. * ಡೇವಿಸ್ ಕಪ್‌ಗೆ ಮಹಿಳೆಯರ ಸಮಾನವಾದ ಬಿಲ್ಲಿ ಜೀನ್ ಕಿಂಗ್ ಕಪ್, ಈ ಹಿಂದೆ ಈ ಕಪ್ ನ್ನು ಫೆಡ್ ಕಪ್ ಎನ್ನಲಾಗುತ್ತದೆ. * ಪ್ರಸ್ತುತ ಆಸ್ಟ್ರೇಲಿಯಾ, ರಷ್ಯಾ, ಜೆಕ್ ರಿಪಬ್ಲಿಕ್ ಹಾಗೂ ಯುನೈಟೆಡ್ ಸ್ಟೇಟ್ಸ್ ಒಂದೇ ವರ್ಷದಲ್ಲಿ ಡೇವಿಸ್ ಕಪ್ ಹಾಗೂ ಫೆಡ್ ಕಪ್ ಪ್ರಶಸ್ತಿಗಳನ್ನು ಜಯಿಸಿರುವ ಏಕೈಕ ದೇಶಗಳಾಗಿವೆ. ಈ ಹಿಂದೆ 1968 ರಿಂದ ಡೇವಿಸ್ ಕಪ್ ಕೇವಲ ಹವ್ಯಾಸಿಗಳು ಹಾಗೂ ರಾಷ್ಟ್ರೀಯ ನೋಂದಾಯಿತ ವೃತ್ತಿಪರ ಆಟಗಾರರಿಗೆ ಮುಕ್ತ ಯುಗ ಆರಂಭವಾದ '5' ವರ್ಷಗಳ ನಂತರ 1973 ರವರೆಗೆ ಸ್ಪರ್ಧಿಸಲು ಅವಕಾಶವನ್ನು ಕಲ್ಪಿಸಲಾಗಿದೆ.