Job Description: * ಇತ್ತೀಚಿಗೆ ಭಾರತೀಯ ನೌಕಾಪಡೆಯು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ದೀರ್ಘ-ಶ್ರೇಣಿಯ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದೀಗ ಸುಧಾರಿತ ಆವೃತ್ತಿಯ ದೀರ್ಘ-ಶ್ರೇಣಿಯ ಈ ಬ್ರಹ್ಮೋಸ್ ಕ್ಷಿಪಣಿಯ ನಿಖರ ದಾಳಿ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಗುರಿಯ ಪಿನ್‌ಪಾಯಿಂಟ್ ನಾಶವು ಯುದ್ಧ ಹಾಗೂ ಮುಂಚೂಣಿ ವೇದಿಕೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಪ್ರದರ್ಶನ ಮಾಡುತ್ತದೆ ಎಂದು ಭಾರತೀಯ ನೌಕಾಪಡೆ ವರದಿ ಮಾಡಿದೆ. * 'ಬ್ರಹ್ಮೋಸ್ ಕ್ಷಿಪಣಿ ಹಾಗೂ INS ಚೆನ್ನೈ ಇವುಗಳನ್ನು ಸ್ಥಳೀಯವಾಗಿ ನಿರ್ಮಿಸಲಾಗಿದೆ, ಇದು ಆತ್ಮ ನಿರ್ಭರ್ ಭಾರತ್ ಹಾಗೂ ಮೇಕ್ ಇನ್ ಇಂಡಿಯಾಕ್ಕೆ ಮತ್ತಷ್ಟು ಬಲ ತಂದಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. * ಭಾರತವು ಈ ಹಿಂದೆ ಜನವರಿಯಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಒಡಿಶಾದ ಕರಾವಳಿಯಲ್ಲಿ ಬಾಲಸೋರ್‌ನಲ್ಲಿ ಪರೀಕ್ಷೆ ಮಾಡಿತ್ತು. * ಬ್ರಹ್ಮೋಸ್‌ನ ವಾಯು-ಉಡಾವಣಾ ರೂಪಾಂತರವನ್ನು 2017 ರ ನವೆಂಬರ್ ನಲ್ಲಿ ಸುಖೋಯ್-30MKI ಯಿಂದ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ. ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿಯ ಹೊ ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ಮುಖ್ಯ ಆಯುಧ ವ್ಯವಸ್ಥೆಯಾಗಿದೆ ಎಂದಿದ್ದಾರೆ.