Job Description: * ಡಚ್ ಫುಟ್ಬಾಲ್ ಲೆಜೆಂಡ್ ಕ್ಲಾರೆನ್ಸ್ ಸೀಡಾರ್ಫ್ ಅವರು ಇಸ್ಲಾಂ ಸ್ವೀಕರಿಸಿರುವುದಾಗಿ ಘೋಷಣೆ ಮಾಡಿದ್ದಾರೆ. ಎಸಿ ಮಿಲಾನ್, ರಿಯಲ್ ಮ್ಯಾಡ್ರಿಡ್ ಮತ್ತು ಅಜಾಕ್ಸ್ ಫುಟ್ಬಾಲ್ ಕ್ಲಬ್'ನ ಮಾಜಿ ಮಿಡ್ ಫೀಲ್ಡರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. * ಯುಇಎಫ್ಎ ಚಾಂಪಿಯನ್ಸ್ ಲೀಗ್ ಇತಿಹಾಸದಲ್ಲಿ '3' ವಿಭಿನ್ನ ಕ್ಲಬ್ ಗಳ ಜೊತೆಗೆ ಚಾಂಪಿಯನ್ಸ್ ಲೀಗ್ ನ್ನು ಜಯಿಸಿರುವ ಏಕೈಕ ಆಟಗಾರ ಸೀಡಾರ್ಫ್. ಪ್ರಸ್ತುತ ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಕೂಡ ಈ ರೀತಿಯ ಸಾಧನೆಯನ್ನು ಮಾಡಿಲ್ಲ. * ಈ ಹಿಂದೆ ಇವರು 2004 ರಲ್ಲಿ ಅವರ ಪೀಳಿಗೆಯ ಅತ್ಯುತ್ತಮ ಮಿಡ್‌ಫೀಲ್ಡರ್‌ಗಳಲ್ಲಿ ಒಬ್ಬರಾಗಿದ್ದರು, FIFA 100 ರ ಭಾಗವಾಗಿ ಪೀಲೆಯಿಂದ ಆಯ್ಕೆಯಾಗಿದ್ದರು. ಸೀಡಾರ್ಫ್ ಅವರು ಕ್ಲಬ್‌ಗಳಿಗಾಗಿ ಆಡುವಾಗ ದೇಶೀಯ ಹಾಗೂ ಭೂಖಂಡದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.