Job Description: * ಇತ್ತೀಚಿಗೆ 2022 ರ ಮಾರ್ಚ್. 04 ರಂದು ಶೇನ್ ವಾರ್ನ್ ಅವರು ನಿಧನರಾಗಿದ್ದಾರೆ. ಇವರೊಬ್ಬ ಆಸ್ಟ್ರೇಲಿಯಾದ ಕ್ರಿಕೆಟಿಗ. ಬಲಗೈ ಲೆಗ್ ಸ್ಪಿನ್ನರ್ ಆಗಿರುವ ಶೇನ್ ವಾರ್ನ್ ಅವರು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ, ಹಾಗೆಯೇ ಇವರನ್ನು 2000 ರಲ್ಲಿ ಕ್ರಿಕೆಟ್ ಪರಿಣಿತರ ಸಮಿತಿಯು ಶತಮಾನದ '5' ವಿಸ್ಡನ್ ಕ್ರಿಕೆಟಿಗರಲ್ಲಿ ಒಬ್ಬರಾಗಿ ಆಯ್ಕೆ ಮಾಡಿದೆ. * ವಾರ್ನ್ ಅವರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು 1992 ರಲ್ಲಿ ಆಡಿದ್ದಾರೆ, ಇವರು ಟೆಸ್ಟ್ ಹಾಗೂ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1,000 ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಹಿಂದೆ ಇವರು 1994 ರ ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್‌ನಲ್ಲಿ ವರ್ಷದ ವಿಸ್ಡೆನ್ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಮತ್ತೇ 1997 ಹಾಗೂ 2004 ರಲ್ಲಿ ವಿಶ್ವದ ವಿಸ್ಡನ್ ಪ್ರಮುಖ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ನಂತರ ಇವರು 2005 ರಿಂದ 2007 ರವರೆಗೆ ಮೂರು ಕ್ರೀಡಾಋತುಗಳಿಗೆ ಹ್ಯಾಂಪ್‌ಶೈರ್‌ನ ನಾಯಕರಾಗಿದ್ದರು. ಇವರು 2006-07 ಆಶಸ್ ಸರಣಿಯ ವಿಜಯದ ಕೊನೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದಿದ್ದಾರೆ. * ಶೇನ್ ವಾರ್ನ್ ಅವರು IPL ನಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡದ ಪರವಾಗಿ ಮೊದಲ '4' ಸೀಸನ್‌ಗಳಲ್ಲಿ 2008 ರಿಂದ 2011 ರ ವರೆಗೆ ಆಡಿದ್ದಾರೆ. ಅವರು ರಾಜಸ್ಥಾನ್ ರಾಯಲ್ಸ್‌ ತಂಡದ ನಾಯಕ ಹಾಗೂ ತರಬೇತುದಾರರಾಗಿದ್ದರು. ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್‌ನ 150 ನೇ ವಾರ್ಷಿಕೋತ್ಸವದಲ್ಲಿ ವಾರ್ನ್ ಸಾರ್ವಕಾಲಿಕ ಟೆಸ್ಟ್ ವರ್ಲ್ಡ್ ಇವರನ್ನು ಹೆಸರಿಸಲಾಗಿತ್ತು. ನಂತರ ಇವರನ್ನು 2012 ರಲ್ಲಿ ಆಸ್ಟ್ರೇಲಿಯಾದಿಂದ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ. ಮತ್ತೇ 2013 ರಲ್ಲಿ ಇವರನ್ನು ICC ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ. * ವಾರ್ನ್ ಅವರ ನಿವೃತ್ತಿಯ ನಂತರ ನಿಯಮಿತವಾಗಿ ಕ್ರಿಕೆಟ್ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ, ಅದರಲ್ಲಿಯೂ ಮುಖ್ಯವಾಗಿ ಆಸ್ಟ್ರೇಲಿಯಾದ ನೈನ್ ನೆಟ್‌ವರ್ಕ್‌ನಲ್ಲಿ ದತ್ತಿ ಸಂಸ್ಥೆಗಳಿಗಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಬೌಲಿಂಗ್ ಮಾಡುವ ಪ್ರತಿಮೆಯನ್ನು ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಹೊರಗೆ ಇರಿಸಲಾಗಿದೆ.