Job Description: * ಇತ್ತೀಚಿಗೆ ಭಾರತದ ಮೊದಲ ಸ್ವದೇಶಿ ತರಬೇತಿ ವಿಮಾನವಾಗಿರುವ ಹಂಸ ಎನ್ ಜಿಯ (HANSA-NG) ಸಮುದ್ರದ ಮೇಲಿನ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಇದರಿಂದಾಗಿ ದೇಶದಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. * ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲ (National Aerospace Laboratories (NAL)) ಈ ಹಂಸ-NG ಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿದೆ. ಈ ವಿಮಾನವು ಅನೇಕ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ, ಹಾಗೂ ಇದೀಗ ಈ ವಿಮಾನವು ವಾಣಿಜ್ಯ ಬಳಕೆಗೆ ಅವಕಾಶವನ್ನು ಪಡೆಯುವ ಹಂತಕ್ಕೆ ಬಂದು ತಲುಪಿದೆ. * ಈ ಹಂಸ ಎನ್ ಜಿಯ (HANSA-NG)ವು ಪುದುಚೇರಿಯ ಕಡಲ ಮೇಲೆ ಇತ್ತೀಚಿಗೆ ಪ್ರಯೋಗಾರ್ಥ ಹಾರಾಟವನ್ನು ನಡೆಸಿದೆ. ಸುಮಾರು 140 ನಾಟಿಕಲ್ ಮೈಲಿ ಅಂತರವನ್ನು ಕೇವಲ ಒಂದೂವರೆ ಗಂಟೆಯಲ್ಲಿ ಕ್ರಮಿಸಿದೆ. ಇದೇ ಸಂಧರ್ಭದಲ್ಲಿ ಈ ವಿಮಾನ ಏರುವ, ಇಳಿಯುವ, ಹಾಗೂ ನೆಲ ಸ್ಪರ್ಶಿಸುವ, ಇನ್ನು ಅನೇಕ ಅಂಶಗಳನ್ನು ಪರಿಶೀಲಿಸಲಾಗಿದೆ ಎಂದು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ ಮಾಹಿತಿ ನೀಡಿದೆ * NAL ಹಂಸ ಎಂಬುದು ಭಾರತೀಯ ಸಂಪೂರ್ಣ-ಸಂಯೋಜಿತ ಕಡಿಮೆ ವಿಂಗ್ ಟ್ರೈಸಿಕಲ್ ಗೇರ್, ಹಾಗೂ ಎರಡು-ಆಸನಗಳ ಸಾಮಾನ್ಯ ವಾಯುಯಾನ ಮೊನೊಪ್ಲೇನ್ ಆಗಿದೆ, ಇದು ವಿಮಾನ ತರಬೇತಿ ಹಾಗೂ ವೈಯಕ್ತಿಕ ಹಾರಾಟಕ್ಕಾಗಿ ಅಭಿವೃದ್ಧಿ ಪಡಿಸಲಾಗಿದೆ. * 2021 ರ ಸೆಪ್ಟೆಂಬರ್ ನಲ್ಲಿ ಹಂಸಾ- NG ಎಂದು ಕರೆಯುವ ವಿಮಾನದ ನವೀಕರಿಸಿದ ಆವೃತ್ತಿಯನ್ನು ಹಾರಿಸಲಾಗಿದೆ ಹಾಗೂ ಮುಂದಿನ 4 ತಿಂಗಳುಗಳಲ್ಲಿ ಪ್ರಮಾಣೀಕರಣವನ್ನು ಅನೇಕ ಫ್ಲೈಯಿಂಗ್ ಕ್ಲಬ್‌ಗಳು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದಿದ್ದಾರೆ. * ಭಾರತದ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಈ 'ಹಂಸ'ವನ್ನು NAL-ಲೈಟ್ ಏರ್‌ಕ್ರಾಫ್ಟ್ ಪ್ರಾಜೆಕ್ಟ್ ಅಡಿಯಲ್ಲಿ ವಿನ್ಯಾಸಗೊಳಿಸಿದೆ. ಒಟ್ಟು '3' ವಿನ್ಯಾಸಗಳನ್ನು ತಯಾರಿಸಲಾಗಿದೆ ಹಾಗೂ 2 ನೇ ವಿನ್ಯಾಸವನ್ನು ಒಂದು ಮೂಲಮಾದರಿಯಾಗಿ ನಿರ್ಮಿಸಲಾಗಿದೆ. ಇದನ್ನು ಈ ಮೊದಲು 1993 ರ ನವೆಂಬರ್. 23 ರಂದು ಹಾರಿಸಲಾಗಿದೆ. 2 ನೇ ಮೂಲಮಾದರಿಯು 3 ನೇ ವಿನ್ಯಾಸವನ್ನು ಆಧರಿಸಿ ಉತ್ಪಾದನೆಗೆ ಆಯ್ಕೆಯಾಗಿ ಅಧಿವೃದ್ಧಿ ಪಡಿಸಲಾಗಿದೆ.