Job Description: * ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಶಿಕ್ಷಣ ಕೇಂದ್ರದಲ್ಲಿ ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಪ್ಲಾನಿಟೋರಿಯಂನ ಸೇವೆಗಳನ್ನು ಸಮರ್ಪಕವಾಗಿ ಬಳಕೆ ಮಾಡಬೇಕಿದೆ ಎಂದಿದ್ದಾರೆ. * ಈ ಪ್ಲಾನಿಟೋರಿಯಂ ಅನ್ನು ಸುಮಾರು 81 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸ್ಥಾಪನೆ ಮಾಡಲಿದೆ. ಈ ಮೂಲಕ ಅಧಿಕ ಯುವ ವಿಜ್ಞಾನಿಗಳು ಬರಬೇಕಿದೆ, ಅದರಲ್ಲಿ ಯುವತಿಯರ ಸಂಖ್ಯೆಯೂ ಹೆಚ್ಚಳವಾಗಬೇಕಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. * ಈ ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರವು ಶಿಕ್ಷಣ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣವನ್ನು ನೀಡುತ್ತದೆ. * ಪ್ರಸ್ತುತ ಭಾರತ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆಯು ಪ್ಲಾನಿಟೋರಿಯಂ ಯೋಜನೆಗೆ ಬೆಂಬಲವನ್ನು ನೀಡುತ್ತಿದೆ ಎಂದಿದ್ದಾರೆ. * ಈ COSMOS ಡಿಜಿಸ್ಟಾರ್ 7 ಸಿಸ್ಟಮ್ ಹಾಗೂ ಡೊಮೆಕ್ಸ್ ಪರದೆಯ ಜೊತೆಗೆ ಭಾರತದ ಮೊದಲ ತಾರಾಲಯವನ್ನು ಆಯೋಜಿಸುತ್ತದೆ. ಇದು ಪ್ಲೇಬ್ಯಾಕ್ ಎಂಜಿನ್ ಒಳಗೊಂಡಿರುವ ಅನನ್ಯ ನೈಜ-ಸಮಯದ ತಾರಾಲಯವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಿಕ್ಷಣ ಹಾಗೂ ತರಬೇತಿಯನ್ನು ಅತ್ಯಂತ ಶಕ್ತಿಶಾಲಿ ಸಾಧನವಾಗಿ ಬಳಸಲಾಗುತ್ತದೆ ಎಂದಿದ್ದಾರೆ. ಈ COSMOS ರಾಜ್ಯದೆಲ್ಲೆಡೆ ವಿಜ್ಞಾನ ಗುಂಪುಗಳ ಜೊತೆಗೆ ಶಿಕ್ಷಕರ ತರಬೇತಿ ಹಾಗೂ ಆಕಾಶ ವೀಕ್ಷಣೆ, ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಬೇಸಿಗೆ ಹಾಗೂ ಚಳಿಗಾಲದ ಶಾಲೆಗಳನ್ನು ನಿಯೋಜಿಸುತ್ತದೆ.