Job Description: * ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳಿ ನಗರದ ಗೋಕುಲ ರಸ್ತೆಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಟ್ಟಡದಲ್ಲಿ ಸ್ಥಾಪನೆ ಮಾಡಲಾಗಿರುವ ರಾಜ್ಯ ಪೊಲೀಸ್‌ ಇಲಾಖೆಯ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದ್ದಾರೆ. * ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಈ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಪ್ರಾರಂಭಿಸಲಾಗಿದೆ. ಈ ಪ್ರಯೋಗಾಲಯದಲ್ಲಿ DNA, ಕಂಪ್ಯೂಟರ್‌, ಮೊಬೈಲ್ಸ್‌, ಆಡಿಯೊ, ವಿಡಿಯೊ ಹಾಗೂ ಭೌತಶಾಸ್ತ್ರ ವಿಧಿವಿಜ್ಞಾನ ವಿಭಾಗಗಳು ಇವೆ. ಪ್ರತಿ ವಿಭಾಗದಲ್ಲಿ '5' ತಾಂತ್ರಿಕ ಅಧಿಕಾರಿಗಳು ಹಾಗೂ '4' ಜನ ಲಿಪಿಕ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಿ ಪ್ರಯೋಗಾಲಯವನ್ನು ಆರಂಭಿಸಲಾಗಿದೆ. * ಈ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಸಬಲೀಕರಣ ಮತ್ತು ಸಶಕ್ತೀಕರಣ ಮಾಡಬೇಕು. ಇದರಿಂದ ಪ್ರಕರಣಗಳ ತನಿಖೆ ಚುರುಕಾಗಬೇಕು ಹಾಗೂ ನಿರೀಕ್ಷೆಗೆ ತಕ್ಕಂತೆ ಇಲಾಖೆಯು ಕರ್ತವ್ಯವನ್ನು ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. * ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯವು (CFSL) ಭಾರತೀಯ ಗೃಹ ವ್ಯವಹಾರಗಳ ಸಚಿವಾಲಯದ ಒಂದು ವಿಭಾಗವಾಗಿದೆ, ಈ ಪ್ರಯೋಗಾಲಯವು ದೇಶದಲ್ಲಿ ನ್ಯಾಯಶಾಸ್ತ್ರದ ಅವಶ್ಯಕತೆಗಳನ್ನು ಪೂರೈಕೆ ಮಾಡುತ್ತದೆ. * ಒಟ್ಟಾರೆ ಭಾರತದಲ್ಲಿ '7' ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಗಳಿವೆ. ಅವುಗಳು ಹೈದರಾಬಾದ್, ಕೋಲ್ಕತ್ತಾ, ಚಂಡೀಗಢ, ನವದೆಹಲಿ, ಗುವಾಹಟಿ, ಭೋಪಾಲ್ ಹಾಗೂ ಪುಣೆಯಲ್ಲಿವೆ. - CFSL ಹೈದರಾಬಾದ್ ರಾಸಾಯನಿಕ ವಿಜ್ಞಾನದಲ್ಲಿ ಉತ್ಕೃಷ್ಟ ಕೇಂದ್ರವಾಗಿದೆ. - CFSL ಕೋಲ್ಕತ್ತಾ ಜೈವಿಕ ವಿಜ್ಞಾನಗಳ ಪ್ರಯೋಗಾಲಯ. - CFSL ಚಂಡೀಗಢ ಭೌತಿಕ ವಿಜ್ಞಾನಗಳ ಪ್ರಯೋಗಾಲಯ. - CFSL ನವದೆಹಲಿಯು ಕೇಂದ್ರೀಯ ತನಿಖಾ ಸಂಸ್ಥೆ, ದೆಹಲಿಯ ಅಡಿಯಲ್ಲಿದೆ.