Job Description: * ಭಾರತೀಯ ಬಾಕ್ಸಿಂಗ್ ತಾರೆ 'ಮೇರಿ ಕೋಮ್' ಅವರು ಯುವ ಪೀಳಿಗೆಗಳು ಆಟದಲ್ಲಿ ಮುಂದುವರೆಯಲಿ, ಹಾಗೂ ಅವರು ದೇಶಕ್ಕೆ ಕೀರ್ತಿ ತರಲಿ, ಹಾಗೂ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸಲಿ, ಎಂದು ವಿಶ್ವ ಚಾಂಪಿಯನ್ ಶಿಪ್ ಹಾಗೂ ಏಷ್ಯನ್ ಗೇಮ್ಸ್ ಗಳನ್ನೂ ತ್ಯಜಿಸಿದ್ದಾರೆ. * ಭಾರತೀಯ ಬಾಕ್ಸಿಂಗ್ ತಾರೆ ಎಂ ಸಿ ಮೇರಿ ಕೋಮ್ ವಿಶ್ವ ಚಾಂಪಿಯನ್ ಶಿಪ್ ಮತ್ತು ಏಷ್ಯನ್ ಗೇಮ್ಸ್ ನ್ನು ಬಿಟ್ಟು ಯುವ ಪೀಳಿಗೆಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (BFI) ಮಾಹಿತಿಯನ್ನು ನೀಡಿದೆ. * ಮೇರಿ ಕೋಮ್ ಅವರು ಒಬ್ಬ ಭಾರತೀಯ ಹವ್ಯಾಸಿ ಬಾಕ್ಸರ್, ರಾಜಕಾರಣಿ ಹಾಗೂ ಪ್ರಸ್ತುತ ಸಂಸತ್ತಿನ ಸದಸ್ಯ, ರಾಜ್ಯಸಭೆ. ಇವರು '6' ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆದ್ದಿರುವ ಏಕೈಕ ಮಹಿಳೆ ಇವರಾಗಿದ್ದಾರೆ. ಹಾಗೂ ಮೊದಲ '7' ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿಯೊಂದರಲ್ಲಿ ಪದಕ ಗೆದ್ದಿರುವ ಏಕೈಕ ಮಹಿಳಾ ಬಾಕ್ಸರ್ ಹಾಗೂ '8' ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಜಯಿಸಿರುವ ಏಕೈಕ ಬಾಕ್ಸರ್ ಇವರಾಗಿದ್ದಾರೆ. ಇವರನ್ನು ಸಾಮಾನ್ಯವಾಗಿ ಮ್ಯಾಗ್ನಿಫಿಸೆಂಟ್ ಮೇರಿ ಎಂದು ಕರೆಯಲಾಗುತ್ತದೆ. ಈ ಹಿಂದೆ 2012 ರ ಬೇಸಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದ ಏಕೈಕ ಭಾರತೀಯ ಮಹಿಳಾ ಬಾಕ್ಸರ್ ಪಟು ಇವರಾಗಿದ್ದಾರೆ. 51 KG ಫ್ಲೈವೇಟ್ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕವನ್ನು ಜಯಿಸಿಕೊಂಡಿದ್ದಾರೆ. ಇಂಟರ್‌ನ್ಯಾಶನಲ್ ಬಾಕ್ಸಿಂಗ್ ಅಸೋಸಿಯೇಷನ್ (ಅಮೆಚೂರ್)ಯಿಂದ ಅವರು ವಿಶ್ವದ ನಂ. 1 ಮಹಿಳಾ ಲೈಟ್-ಫ್ಲೈವೇಟ್ ಎಂದು ಶ್ರೇಯಾಂಕ ಪಡೆದಿದ್ದಾರೆ. * ಮೇರಿ ಕೋಮ್ ಅವರು 2014 ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಇವರಾಗಿದ್ದಾರೆ. ಮತ್ತೇ 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಕೂಡ ಆಗಿದ್ದಾರೆ. ಹಾಗೂ ಈ ಹಿಂದೆ ಇಂಡೋನೇಷ್ಯಾದಲ್ಲಿ ಜರುಗಿರುವ ಅಧ್ಯಕ್ಷರ ಕಪ್‌ನಲ್ಲಿ ಮೇರಿ ಕೋಮ್ 51 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಭಾರತದ ರಾಷ್ಟ್ರಪತಿಗಳು ಕೋಮ್ ಅವರನ್ನು ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರಾಗಿ 2016 ರ ಏಪ್ರಿಲ್. 25 ರಂದು ನಾಮನಿರ್ದೇಶನ ಮಾಡಿದ್ದಾರೆ. ಮತ್ತೇ ಇವರನ್ನು 2017 ರಲ್ಲಿ ಬಾಕ್ಸಿಂಗ್‌ಗಾಗಿ ರಾಷ್ಟ್ರೀಯ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. * 2018 ರ ಡಿಸೆಂಬರ್. 11 ರಂದು ಮಣಿಪುರ ಸರ್ಕಾರವು ಇಂಫಾಲ್‌ನಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಮೇರಿ ಕೋಮ್ ಅವರಿಗೆ 'ಮೀಥೋಯ್ ಲೀಮಾ' ಎಂಬ ಬಿರುದನ್ನು ನೀಡಿ ಗೌರವಿಸಿದೆ. ಮತ್ತೇ 2020 ರಲ್ಲಿ ಮೇರಿ ಕೋಮ್ ಅವರಿಗೆ ಭಾರತದ 2 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.