Job Description: * ಪ್ರಸ್ತುತ 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರಗತಿ ಪರ ಮಹಿಳಾ ರೇಷ್ಮೆ ಬೆಳೆಗಾರರ ವಿಭಾಗದಿಂದ ನೀಡುವ ಪ್ರಶಸ್ತಿಯ ದೊಡ್ಡಬಳ್ಳಾಪುರಕ್ಕೆ ಲಭಿಸಿದೆ. ದೊಡ್ಡಬಳ್ಳಾಪುರದ ಸೀಗೆಹಳ್ಳಿ ಎಂಬ ಗ್ರಾಮದ ರತ್ನಮ್ಮ ರಾಮಯ್ಯ ಅವರಿಗೆ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಲಭಿಸಿದೆ. ಹಾಗೂ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ಗಂಗಪ್ಪ ಅವರು ಪುರುಷ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ರತ್ನಮ್ಮ ರಾಮಯ್ಯ ಅವರು 2020-21 ನೇ ಸಾಲಿನಲ್ಲಿ ಕೇವಲ 1 ಎಕರೆ ಪ್ರದೇಶದಲ್ಲಿ ವಾರ್ಷಿಕವಾಗಿ ಉತ್ಪದನಾ ವೆಚ್ಚವನ್ನು ಬಿಟ್ಟು 3.83 ಲಕ್ಷ ರೂಪಾಯಿ ಲಾಭವನ್ನು ಗಳಿಸಿದ್ದಾರೆ. ರತ್ನಮ್ಮ ಅವರು ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆಗಳನ್ನು ಪಾಲಿಸುವ ಮೂಲಕ ಎಲ್ಲಾ ರೈತರಿಗೆ ಮಾದರಿಯಾಗಿದ್ದಾರೆ. * ದೊಡ್ಡಬಳ್ಳಾಪುರದ ಕಸಬಾ ಹೋಬಳಿ ಮರಳೇನಹಳ್ಳಿ ತಿಮ್ಮರಾಜು ಗಂಗಪ್ಪ 2020-21 ನೇ ಸಾಲಿನಲ್ಲಿ 1 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿಕೊಂಡು, ವಾರ್ಷಿಕ ಸುಮಾರು 5 ಬೆಳೆಗಳನ್ನು ಬೆಳೆಯುತ್ತಾ ವಾರ್ಷಿಕವಾಗಿ 3.5 ಲಕ್ಷ ರೂಪಾಯಿಗಳಷ್ಟು ಲಾಭ ಗಳಿಸಿದ್ದಾರೆ. * ರಾಮನಗರದಲ್ಲಿ ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಲಾಗಿದೆ. ಇದೀಗ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡುತ್ತಿರುವುದು ರೈತರಿಗಾಗಿ ಹೊರತು ವ್ಯಾಪಾರಿಗಳಿಗಲ್ಲ ಎಂದಿದ್ದಾರೆ. * ರತ್ನಮ್ಮ ರಾಮಯ್ಯ ಅವರು ಈ ಹಿಂದೆ 2006-17 ರಲ್ಲಿ ಮಹಿಳಾ ರೇಷ್ಮೆ ಪ್ರಗತಿಪರ ರೈತರಾಗಿ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು 1 ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಇವರು ವಾರ್ಷಿಕವಾಗಿ 10 ಕ್ಕೂ ಅಧಿಕ ಬೆಳೆಗಳನ್ನು ಬೆಳೆಯುವ ಮೂಲಕ ಶೇ. 100 ಕ್ಕೂ ಅಧಿಕ ಲಾಭ ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಪ್ರಶಸ್ತಿಯನ್ನು ಪಡೆದಿದ್ದಾರೆ.