Job Description: * ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್‌ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ, ಈ ಸಂಧರ್ಭದಲ್ಲಿ ಉಕ್ರೇನ್‌ನಲ್ಲಿ ಸಿಲುಕಿಕೊಂಡುರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಮರಳಿ ಭಾರತಕ್ಕೆ ಕರೆತರಲು "ಆಪರೇಷನ್ ಗಂಗಾ" ಎಂಬ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ, ಇದೀಗ ಆ ಕಾರ್ಯಾಚರಣೆಯು ಯಶಸ್ವಿಯಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಚ್ಚಿನ ಗೌರವವನ್ನು ತರಲು ಪ್ರಮುಖ ಕಾರಣವಾಗಿದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ. * ಇತ್ತೀಚಿಗೆ ಪ್ರಧಾನಿ ಮೋದಿ ಅವರು ಸಿಂಬಯಾಸಿಸ್‌ ವಿವಿಯ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಈ "ಆಪರೇಷನ್ ಗಂಗಾ" ಬಗ್ಗೆ ಮಾತನಾಡಿದ್ದಾರೆ. ಈ ಕಾರಣದಿಂದಾಗಿ ಭಾರತದ ಗೌರವ ಹೆಚ್ಚಾಗಿದೆ ಎಂದಿದ್ದಾರೆ. * ಇತ್ತೀಚಿಗೆ ರಷ್ಯಾ ರಾಷ್ಟ್ರವು ಉಕ್ರೇನ್ ಮೇಲೆ ಯುದ್ಧವನ್ನು ನಡೆಸಿದೆ, ಇದೀಗ ಭಾರತ ಸರ್ಕಾರವು ಅಲ್ಲಿನ ಭಾರತೀಯ ನಾಗರಿಕರಿಗೆ ಮಾನವೀಯ ನೆರವು ನೀಡುವ ದೃಷ್ಟಿಯಿಂದ 'ಆಪರೇಷನ್ ಗಂಗಾ' ಎಂಬ ಕಾರ್ಯಾಚರಣೆಯನ್ನು ನಡೆಸುತ್ತಿದೆ. ನಾಗರಿಕರು ಭಾರತವನ್ನು ತಲುಪಲು ನೆರೆಯ ದೇಶಗಳಾಗಿರುವ ರೊಮೇನಿಯಾ, ಹಂಗೇರಿ, ಪೋಲೆಂಡ್, ಮೊಲ್ಡೊವಾ, ಸ್ಲೋವಾಕಿಯಾಗಳಿಂದ ಸಾರಿಗೆ ಸಹಾಯವನ್ನು ನೀಡುತ್ತಿವೆ. * ಇತ್ತೀಚಿಗೆ ಉಕ್ರೇನಿಯನ್ ಬುಕಾರೆಸ್ಟ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಮೊದಲ ವಿಮಾನವು ಫೆಬ್ರವರಿ. 27 ರಂದು ಭಾರತದೆಡೆಗೆ ಪ್ರಮಾಣ ಬೆಳೆಸಿತ್ತು. ಉಕ್ರೇನ್'ನಲ್ಲಿರುವ ಭಾರತೀಯರಿಗೆ ಸಹಾಯ ಮಾಡಲು '4' ಕೇಂದ್ರ ಮಂತ್ರಿಗಳನ್ನು ನೆರೆಯ ದೇಶಗಳಿಗೆ ಕಳುಹಿಸಲಾಗಿದೆ. ಭಾರತೀಯ ವಾಯುಪಡೆ ಹಾಗೂ ಬಹು ಖಾಸಗಿ ವಿಮಾನಯಾನ ಸಂಸ್ಥೆಗಳು ವ್ಯವಸ್ಥಾಪನಾ ಬೆಂಬಲವನ್ನು ನೀಡಿವೆ. * ಭಾರತವು ಉಕ್ರೇನ್‌ನಲ್ಲಿಒಟ್ಟಾರೆಯಾಗಿ 20,000 ಭಾರತೀಯ ಪ್ರಜೆಗಳನ್ನು ಹೊಂದಿದೆ, ಅವರಲ್ಲಿ 18,000 ವಿದ್ಯಾರ್ಥಿಗಳಾಗಿದ್ದಾರೆ. ಇದೇ ಮಾರ್ಚ್. 5 ರ ವೇಳೆಗೆ 13,300 ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ. ಅಲ್ಲಿನ ಭಾರತೀಯರಿಗೆ ಇದೇ ಮಾರ್ಚ್ 2 ರಂದು ಉಕ್ರೇನಿನ 'ಖಾರ್ಕಿವ್'ನ್ನು ತಕ್ಷಣವೇ ತೊರೆಯಿರಿ ಎಂದು ಭಾರತೀಯ ರಾಯಭಾರ ಸಲಹೆಯನ್ನು ನೀಡಿದ್ದಾರೆ. * ಭಾರತ ಸರ್ಕಾರವು ಮಾನವೀಯ ಸಂಕೇತವಾಗಿ ಔಷಧಗಳು ಹಾಗೂ ಅಗತ್ಯವಿರುವ ಮೂಲ ವಸ್ತುಗಳನ್ನು ಉಕ್ರೇನ್‌ಗೆ ಸಹಾಯ ರೂಪದಲ್ಲಿ ನೀಡಿದೆ. ಉಕ್ರೇನ್‌ನಲ್ಲಿ ನೆರೆಯ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಜೆಗಳು ಕೋರಿದರೆ ನೆರವು ನೀಡಲಾಗುತ್ತದೆ ಎಂದು ಎಂದು ಭಾರತ ಸರ್ಕಾರವು ಹೇಳಿಕೆ ನೀಡಿದೆ.