Job Description: * ಪ್ರಸ್ತುತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)ದ ಗವರ್ನರ್ ಆಗಿರುವ ಶಕ್ತಿಕಂಠ ದಾಸ್ ಅವರು ಇತ್ತೀಚಿಗೆ ಹೊಸ ಇನ್‍ಸ್ಟೆಂಟ್ ಪಾವತಿ ವ್ಯವಸ್ಥೆ 'UPI 123 PAY'ನ್ನು ಫೀಚರ್ ಫೋನ್ (ಸ್ಮಾರ್ಟ್‌ ಫೋನ್‌ ಅಲ್ಲದ ಸಾಮಾನ್ಯ ಫೋನ್) ಬಳಕೆ ಮಾಡುವವರಿಗಾಗಿ ಬಿಡುಗಡೆ ಮಾಡಿದ್ದಾರೆ. * ಈ ಹೊಸ UPI ಭಾರತದಲ್ಲಿನ ಸರಿ ಸುಮಾರು 40 ಕೋಟಿಗಳಷ್ಟು ಫೀಚರ್ ಫೋನ್ ಬಳಕೆ ಮಾಡುವವರಿಗೆ ಸುರಕ್ಷಿತ ರೀತಿಯಲ್ಲಿ ಪಾವತಿಯನ್ನು ಮಾಡಲು ಅವಕಾಶವನ್ನು ಒದಗಿಸಿಕೊಟ್ಟಿದೆ. * ಪ್ರಸ್ತುತ ಈ UPI ಸೇವೆಯು ಬಳಕೆದಾರರಿಗೆ USSD ಆಧರಿತ ಸೇವೆಗಳ ಮೂಲಕ ಲಭ್ಯವಿರಲಿದೆ. ಇದೀಗ ಈ ಹೊಸ ಯುಪಿಐ ಪಾವತಿ ವ್ಯವಸ್ಥೆಯು ಫೀಚರ್ ಫೋನ್ ಬಳಕೆ ಮಾಡುವ ಗ್ರಾಹಕರಿಗೆ ಐವಿಆರ್ ಸಂಖ್ಯೆಗೆ ಕರೆ, ಆಯಪ್ ಕಾರ್ಯಾತ್ಮಕತತೆ ಆಧರಿತ, ಮಿಸ್ಡ್ ಕರೆ ಆಧರಿತ ಹಾಗೂ ಧ್ವನಿ-ಆಧರಿತ ಪಾವತಿಗಳಿಗೆ ಅವಕಾಶವನ್ನು ಒದಗಿಸಲಿದೆ. * ಈ ಹೊಸ UPI ಸೇವೆಯು ಬಳಸಿ ಬಳಕೆದಾರರಿಗೆ ಸ್ನೇಹಿತರು ಹಾಗೂ ಕುಟುಂಬ ವರ್ಗಗಳಿಗೆ ಪಾವತಿ ಮಾಡಬಹುದಾಗಿದೆ, ಹಾಗೂ ಬಿಲ್ ಪಾವತಿ, ವಾಹನಗಳ ಫ್ಯಾಸ್ಟ್ಯಾಗ್ ರಿಚಾರ್ಜ್, ಮೊಬೈಲ್ ಬಿಲ್ ಪಾವತಿಸ ಬಹುದಾಗಿದೆ ಹಾಗೂ ಬಳಕೆದಾರರು ತಮ್ಮ ಖಾತೆಗಳ ಬ್ಯಾಲೆನ್ಸ್ ಸಹ ಪರೀಕ್ಷಿಸಿಕೊಳ್ಳಬಹುದಾಗಿದೆ, ಹಾಗೂ UPI ಪಿನ್‍ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಅಥವಾ ಬದಲಾಯಿಸಿಕೊಳ್ಳಬಹುದಾಗಿದೆ ಎಂದು RBI ಮಾಹಿತಿ ನೀಡಿದೆ. * RBI ಗವರ್ನರ್ ಶಕ್ತಿ ಕಾಂತ್ ದಾಸ್ ಅವರು ಡಿಜಿಟಲ್ ಪಾವತಿಗಳಿಗಾಗಿ 24x7 ಸಹಾಯವಾಣಿಯನ್ನು ಆರಂಭಿಸಿದ್ದಾರೆ. ವೆಬ್‌ಸೈಟ್ ಹಾಗೂ ಚಾಟ್‌ಬಾಟ್(SMS) ಮಾಡುವ ಮೂಲಕ ಡಿಜಿಟಲ್ ಪಾವತಿಗಳ ಬಗೆಗಿನ ಎಲ್ಲಾ ಪ್ರಶ್ನೆಗಳಿಗೆ ಈ 14431 ಮತ್ತು 1800 891 3333 ಸಹಾಯವಾಣಿಯು ಸಹಾಯ ಮಾಡಲಿದೆ ಎಂದಿದ್ದಾರೆ. * ಪ್ರಸ್ತುತ UPI ನ್ನು ಎಲ್ಲಾ ಡಿಜಿಟಲ್ ಪಾವತಿಗಳಿಗಾಗಿ ಛತ್ರಿ ಸಂಸ್ಥೆಯಾಗಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.