Job Description: * ಪ್ರಸ್ತುತ ಇದೇ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬರು ತಮಿಳುನಾಡಿನ ಚೆನ್ನೈ ಪಾಲಿಕೆಗೆ ಮೇಯರ್‌ ಸ್ಥಾನವನ್ನು ಅಲಂಕರಿಸಲಿದ್ದಾರೆ. ಸದ್ಯ ಆಡಳಿತಾರೂಢ ಡಿಎಂಕೆ ಪಕ್ಷವು ಇತ್ತೀಚಿಗೆ 28 ವರ್ಷ ವಯಸ್ಸಿನ ಆರ್‌.ಪ್ರಿಯಾ ಎಂಬ ಮಹಿಳೆಯ ಹೆಸರನ್ನು ಮೇಯರ್‌ ಸ್ಥಾನಕ್ಕೆ ಹೆಸರಿಸಿದೆ. ಇದೇ ಮಾರ್ಚ್.4 ರಂದು ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ನ (GCC) ಮೇಯರ್‌ ಸ್ಥಾನಕ್ಕೆ ಪರೋಕ್ಷವಾಗಿ ಚುನಾವಣೆ ನಡೆಸಲಿದೆ ಎಂದಿದ್ದಾರೆ. * ಪ್ರಸ್ತುತ ಚೆನ್ನೈನ ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ನ ಒಟ್ಟು 200 ವಾರ್ಡ್‌ಗಳ ಪೈಕಿ DMK ಪಕ್ಷವು 153 ವಾರ್ಡ್‌ಗಳಲ್ಲಿ ಜಯವನ್ನು ಗಳಿಸಿದ್ದಾರೆ. ಇದೀಗ DMK ಪಕ್ಷವು ಸೂಚಿಸಿರುವ ಹಾಗೇ ಆರ್‌.ಪ್ರಿಯಾ ಅವರು ಮೇಯರ್‌ ಸ್ಥಾನವನ್ನು ಅಲಂಕರಿಸುವದು ಬಹುತೇಕ ಖಚಿತವಾಗಿದೆ. * ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಈ ಹಿಂದೆ ಕಾರ್ಪೊರೇಷನ್ ಆಫ್ ಮದ್ರಾಸ್ ಮತ್ತು ಕಾರ್ಪೊರೇಶನ್ ಆಫ್ ಚೆನ್ನೈ ಎಂದು ಕರೆಯಲಾಗುತ್ತಿತ್ತು, ಇದೊಂದು ಭಾರತದ ತಮಿಳುನಾಡಿನಲ್ಲಿ ಚೆನ್ನೈ ನಗರವನ್ನು ನಿಯಂತ್ರಿಸುವ ನಾಗರಿಕ ಸಂಸ್ಥೆಯಾಗಿದೆ. ಈ ಹಿಂದೆ 1688 ರ ಸೆಪ್ಟೆಂಬರ್. 29 ರಂದು, ಇಂಗ್ಲೆಂಡ್‌ನ ಕಿಂಗ್ ಜೇಮ್ಸ್ II ರವರು 1687 ರ ಡಿಸೆಂಬರ್. 30 ರಂದು ಕಾರ್ಪೊರೇಶನ್ ಆಫ್ ಮದ್ರಾಸ್ ಆಗಿ ಆದೇಶಿಸಿದ ರಾಯಲ್ ಚಾರ್ಟರ್ ಅಡಿಯಲ್ಲಿನ ಅದೊಂದು ಗ್ರೇಟ್ ಬ್ರಿಟನ್‌ ನ ಹೊರಗೆ ಕಾಮನ್‌ವೆಲ್ತ್ ಆಫ್ ನೇಷನ್ಸ್‌ನ ಅತ್ಯಂತ ಹಳೆಯ ಪುರಸಭೆಯಾಗಿದೆ. ಈ ಹಿಂದೆ 1588 ರಲ್ಲಿ ಸ್ಥಾಪನೆಯಾಗಿರುವ ದಮನ್ ಪುರಸಭೆಯ ನಂತರ ಏಷ್ಯಾದ ಅತ್ಯಂತ ಹಳೆಯ ಪುರಸಭೆಗಳಲ್ಲಿ ಇದು ಕೂಡ ಒಂದಾಗಿದೆ. ಪ್ರಸ್ತುತ ಈ ಪುರಸಭೆಯ ತಮಿಳುನಾಡಿನ ಅತಿ ದೊಡ್ಡ ಪುರಸಭೆಯಾಗಿದೆ. ಈ ಪುರಸಭೆಯು ಮೇಯರ್ ಸಮ್ಮುಖದಲ್ಲಿ 200 ಕ್ಕೂ ಅಧಿಕ ಕೌನ್ಸಿಲರ್‌ಗಳ ಅಧ್ಯಕ್ಷತೆ ವಹಿಸುತ್ತಾರೆ, ಇದು ಲಂಡನ್ ನಗರದ ನಂತರದಲ್ಲಿ ವಿಶ್ವದ 2 ನೇ ಅತ್ಯಂತ ಹಳೆಯ ನಾಗರಿಕ ನಿಗಮ ಇದಾಗಿದೆ.