Job Description: * ಸುಸ್ಥಿರ ಅಭಿವೃದ್ಧಿಗಾಗಿ ನ್ಯಾನೋ ತಂತ್ರಜ್ಞಾನ ಎಂಬ ಧ್ಯೇಯವ್ಯಾಕ್ಯದಡಿಯಲ್ಲಿ 12 ನೇ ವರ್ಷದ "ಬೆಂಗಳೂರು-ಇಂಡಿಯಾ ನ್ಯಾನೋ" ಸಮಾವೇಶವು ಪ್ರಥಮ ಬಾರಿಗೆ ವರ್ಚುಯಲ್ ರೀತಿಯಲ್ಲಿ ಇದೇ ಮಾರ್ಚ್. 7 ರಿಂದ 9 ರ ವರೆಗೆ ನಡೆಸಲಾಗುತ್ತದೆ ಎಂದು ಐಟಿ, ಬಿಟಿ ಹಾಗೂ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ. * ಪ್ರಸ್ತುತ 12 ನೇ ವರ್ಷದ 'ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ'ಕ್ಕೆ ಕೆನಡಾ, ಇಸ್ರೇಲ್, ಜರ್ಮನಿ, ನೆದರ್ಲೆಂಡ್ಸ್ ಮತ್ತು ಜಪಾನ್ ಹೀಗೆ 10 ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಇವುಗಳ ಜೊತೆಗೆ '5' ಉದ್ಯಮ ಸಂಸ್ಥೆಗಳು ಕೂಡ ಈ ಸಮಾವೇಶದ ಜೊತೆಯಾಗಿ ನಿಲ್ಲಲು ಸಿದ್ಧವಾಗಿವೆ. ಇದೇ ಮಾರ್ಚ್.7-8 ರಂದು ಜರುಗಲಿದೆ. ಹಾಗೂ ಕೊನೆಯ ದಿನದಂದು ಅಂದರೆ ಮಾರ್ಚ್. 9 ರಂದು ದಿನ ತಲಾ 1 ಗಂಟೆ ಕಾಲದ ಅವಧಿಯಲ್ಲಿ ವಿದ್ಯಾರ್ಥಿಗಳಿಗಾಗಿ ಟ್ಯುಟೋರಿಯಲ್ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದಿದ್ದಾರೆ. * ಇದೀಗ ನ್ಯಾನೋ ವಲಯದ ವಹಿವಾಟು ಸದ್ಯಕ್ಕೆ ಜಾಗತಿಕವಾಗಿ 75 ಶತಕೋಟಿ ಡಾಲರುಗಳಷ್ಟಿದೆ. ಹಾಗೆಯೇ ಇದು 2028 ರ ವೇಳೆಗೆ 300 ಶತಕೋಟಿ ಡಾಲರ್ ಹಂತಕ್ಕೆ ಏರಲಿದೆ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ನ್ಯಾನೋ ವಿಜ್ಞಾನ, ಜೈವಿಕ ವಿಜ್ಞಾನ ಹಾಗೂ ಆರೋಗ್ಯ ವಿಜ್ಞಾನಗಳು ಜನರ ಜೀವವನ್ನು ಉಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಪ್ರಮುಖವಾಗಿ ನ್ಯಾನೋ ಮೆಡಿಸಿನ್, ನ್ಯಾನೋ ಫೋಟೋನಿಕ್ಸ್, ನ್ಯಾನೋ ಟೆಕ್ಸ್-ಟೈಲ್ಸ್ ಹಾಗೂ ಹೈಡ್ರೋಜನ್ ಆರ್ಥಿಕತೆ ಬಗೆಗಿನ ಸಮಾವೇಶದಲ್ಲಿ ಗೋಷ್ಠಿಗಳು ನಡೆಯುತ್ತವೆ. * ಈ ಸಮಾವೇಶದಲ್ಲಿ 25 ಕ್ಕೂ ಅಧಿಕ ಪೂರ್ಣಪ್ರಮಾಣದ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ, ಹಾಗೂ 75 ಕ್ಕೂ ಅಧಿಕ ಪರಿಣತರು ಚರ್ಚಿಸಲಿದ್ದಾರೆ. ಇವುಗಳ ಜೊತೆಗೆ 40 ಪ್ರದರ್ಶನ ಮಳಿಗೆಗಳು ಇರಲಿವೆ ಒಟ್ಟಾರೆಯಾಗಿ 4 ಸಾವಿರಕ್ಕೂ ಅಧಿಕ ಜನರು ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. * ಪ್ರಸ್ತುತ ನ್ಯಾನೋ ವಿಜ್ಞಾನದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿರುವ '5' ಯುವ ಪ್ರತಿಭಾವಂತರಿಗೆ ರಾಜ್ಯ ಸರ್ಕಾರದ ವತಿಯಿಂದ "ನ್ಯಾನೋ ಎಕ್ಸಲೆನ್ಸ್" ಪುರಸ್ಕಾರ ಮತ್ತು "ಸಿಎನ್‌ಆರ್ ರಾವ್ ಪುರಸ್ಕಾರ"ಗಳನ್ನು ನೀಡಲಾಗುತ್ತದೆ. ಹಾಗೂ ಪ್ರಥಮ ಬಾರಿಗೆ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟು 'ನ್ಯಾನೋ ಫಾರ್ ಯಂಗ್ ಹಾಗೂ ನ್ಯಾನೋ ಕ್ವಿಜ್ ಕಾರ್ಯಕ್ರಮವನ್ನು ನಡೆಸಲಾಗುವದು ಎಂದಿದ್ದಾರೆ. ಈ ನ್ಯಾನೋ ಕ್ವಿಜ್ ಕಾರ್ಯಕ್ರಮಕ್ಕೆ 23 ರಾಜ್ಯ ಹಾಗೂ 5 ಕೇಂದ್ರಾಡಳಿತ ಪ್ರದೇಶಗಳ 650 ವಿದ್ಯಾರ್ಥಿಗಳು ಅವರ ಹೆಸರನ್ನು ನೋಂದಾಯಿಸಿದ್ದಾರೆ. * ಪ್ರಸ್ತುತ ಸರ್ಕಾರವು ವಿಜ್ಞಾನ ಹಾಗೂ ತಂತ್ರಜ್ಞಾನ ವಿಷನ್ ಗ್ರೂಪ್'ನ ಮೂಲಕ ಇದೀಗ ರಾಜ್ಯದ 1,500 ಕಾಲೇಜುಗಳಿಗೆ ಸಂಶೋಧನೆಯನ್ನು ಪ್ರೋತ್ಸಾಹಿಸಲು ಸುಮಾರು 200 ಕೋಟಿ ರೂ. ಹಣವನ್ನು ವಿತರಣೆ ಮಾಡಲಾಗಿದೆ. ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಪ್ರೊ.ನವಕಾಂತ ಅವರು ಈ ಬಗ್ಗೆ ವಿಷಯಗಳನ್ನು ಹಂಚಿಕೊಂಡರು.