Job Description: * ಪ್ರಸ್ತುತ ಉಡುಪಿ ಜಿಲ್ಲಾಡಳಿತವು ಮಕ್ಕಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ, ಅಕ್ರಮ ಸಾಗಾಟ ತಡೆಯುವಲ್ಲಿ ಉತ್ತಮ ಸಾಧನೆಯನ್ನು ಮಾಡಿರುವ ಹಿನ್ನಲೆಯಿಂದಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. * ಇತ್ತೀಚಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಹಾಗೂ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳವು ಜೊತೆಯಾಗಿ ಮಕ್ಕಳಲ್ಲಿ ಡ್ರಗ್ಸ್‌ ಹಾಗೂ ಮಾದಕ ವಸ್ತುಗಳ ಬಳಕೆ, ಅಕ್ರಮ ಕಳ್ಳಸಾಗಣೆಯನ್ನು ತಡೆಗಟ್ಟುವ ಸಲುವಾಗಿ 'ಏಕ್‌ ಯುಧ್‌ ನಶೆ ಕೆ ವಿರೋಧ್‌' ಎನ್ನುವ ಕ್ರಿಯಾ ಯೋಜನೆ ಜಾರಿ ಮಾಡಿವೆ. * ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯವು ದೇಶದಲ್ಲಿನ ಮಕ್ಕಳನ್ನು ಮಾದಕ ವ್ಯಸನದಿಂದ ದೂರ ಮಾಡಲು ಮತ್ತು ಶಾಲಾ ಕಾಲೇಜು ಪ್ರದೇಶಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ಸ್ಥಗಿತಗೊಳಿಸಲು ದೇಶದಾದ್ಯಂತ ಮೊದಲ ಹಂತದಲ್ಲಿ 272 ಜಿಲ್ಲೆಗಳಲ್ಲಿ ಕ್ರಿಯಾಯೋಜನೆಯ ಅನುಷ್ಠಾನಗೊಳಿಸಿದೆ. * ಕಳೆದ ವರ್ಷದ 2021 ರ ಜುಲೈ ತಿಂಗಳಿಂದ ಡಿಸೆಂಬರ್‌ ತಿಂಗಳಿನವರೆಗೆ ಪ್ರಗತಿಯ ಆಧಾರದ ಮೇಲೆ 20 ಅತ್ಯುತ್ತಮ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯು ಕೂಡ ಒಂದು ಈ ಹಿನ್ನಲೆಯಿಂದಾಗಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಉಡುಪಿ ಜಿಲ್ಲೆಯು ಕರ್ನಾಟಕ ರಾಜ್ಯದ ಏಕೈಕ ಜಿಲ್ಲೆಯಾಗಿದೆ. ಇತ್ತೀಚಿಗೆ ದೆಹಲಿಯ ವಿಜ್ಞಾನ ಭವನದಲ್ಲಿ NCB ಹಿರಿಯ ಅಧಿಕಾರಿಗಳು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ. * * ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) : ಇದೊಂದು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿನ ಭಾರತೀಯ ಕೇಂದ್ರ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಯಾಗಿದೆ. ಈ ಹಿಂದೆ 1986 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಭಾರತದ ರಾಜ್ಯ ಸರ್ಕಾರಗಳು ಹಾಗೂ ಇತರ ಕೇಂದ್ರ ಇಲಾಖೆಗಳ ಜೊತೆಗೆ ಸಮನ್ವಯತೆ, ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಪಟ್ಟಿರುವ ಭಾರತದ ಅಂತರರಾಷ್ಟ್ರೀಯ ಕಟ್ಟುಪಾಡುಗಳ ಅನುಷ್ಠಾನ ಹಾಗೂ ಅಂತರರಾಷ್ಟ್ರೀಯ ಮತ್ತು ವಿದೇಶಿ ಮಾದಕವಸ್ತು ಕಾನೂನು ಜಾರಿಗೆ ತರುವ ಸಂಸ್ಥೆಗಳಿಗೆ ಸಹಾಯವನ್ನು ಕಲ್ಪಿಸುವ ಜವಾಬ್ದಾರಿಯನ್ನು ಹೊಂದಿದೆ.