Job Description: * ಪ್ರತೀ ವರ್ಷವು ಮಾರ್ಚ್. 3 ರಂದು ವಿಶ್ವ ವನ್ಯಜೀವಿ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರಸ್ತುತ ಭೂಮಿಯಲ್ಲಿ ಜೀವಿಸಲು ಮನುಷ್ಯನಷ್ಟೇ ಅರ್ಹತೆ, ಹಕ್ಕು ವನ್ಯ ಜೀವಿಗಳಿಗೂ ಇದೆ. ವನ್ಯಜೀವಿಗಳ ಸಂರಕ್ಷಣೆ, ಹಾಗೂ ಆಕ್ರಮಣ ತಡೆಯಲು ಜನರಲ್ಲಿ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. * ಈ ಹಿಂದೆ 2013 ರ ಡಿಸೆಂಬರ್. 20 ರಂದು 68 ನೇ ಅಧಿವೇಶನದಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (UNGA)ಯ ನಿರ್ಣಯ UN 68/205 ರಲ್ಲಿ, ಮಾರ್ಚ್. 3 ನ್ನು ಘೋಷಣೆ ಮಾಡಲು ನಿರ್ಧಾರವನ್ನು ಕೈಗೊಂಡಿತ್ತು. ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶವನ್ನು ಅಳವಡಿಸಿಕೊಳ್ಳುವ ಅಂತರರಾಷ್ಟ್ರೀಯ ದಿನ ಗ್ರಹದ ಮೇಲೆ ಪ್ರಾಣಿಗಳು ಹಾಗೂ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ ಹಾಗೂ 1973 ರಲ್ಲಿ ವಿಶ್ವ ವನ್ಯಜೀವಿ ದಿನವಾಗಿ ಪ್ರಾಣಿ ಮತ್ತು ಸಸ್ಯಗಳಿಗೆ ಪ್ರಯೋಜನವನ್ನು ಕಲ್ಪಿಸುತ್ತವೆ. ಪ್ರಪಂಚದ ಕಾಡು ಪ್ರಾಣಿ ಹಾಗೂ ಸಸ್ಯವರ್ಗವನ್ನು ಆಚರಿಸಲು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಥೈಲ್ಯಾಂಡ್ ರಾಷ್ಟ್ರವು ಈ ಸ್ಮರಣಾರ್ಥವನ್ನು ಪ್ರಸ್ತಾಪಿಸಿದೆ. * ಪ್ರಸ್ತುತ ಜೀವವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟ 4,500 ಜಾತಿಯ ಹೂ ಬಿಡುವ ಸಸ್ಯಗಳು, 650 ಜಾತಿಯ ಮರಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಈ ಸಹ್ಯಾದ್ರಿ ಪರ್ವತ ಶ್ರೇಣಿಯು ಪ್ರಪಂಚದ 34 ಗ್ರೀನ್‌ ಹಾಟ್‌ಸ್ಪಾಟ್‌ಗಳಲ್ಲಿ ಇದು ಒಂದಾಗಿದೆ. ಈ ಪಶ್ಚಿಮ ಘಟ್ಟವು ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್‌ ಸೇರಿ ಭಾರತದ ಕೊಂಕಣ ಕರಾವಳಿಯ ಉದ್ದಕ್ಕೂ ಸರಿ ಸುಮಾರು 1,600 ಕಿ.ಮೀ. ವಿಸ್ತಾರವಾಗಿದೆ ಈ ಘಟ್ಟವು ಶ್ರೇಣಿಯ ಅರ್ಧಕ್ಕಿಂತಲೂ ಹೆಚ್ಚಿನ ಭಾಗವು ಕರ್ನಾಟಕ ರಾಜ್ಯದಲ್ಲಿದೆ. * ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ-AI(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ ವನ್ಯಜೀವಿಗಳ ರಕ್ಷಣೆ ಹಾಗೂ ಕಾಡಿನಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ಸುಲಭದಲ್ಲಿ ಪತ್ತೆಹಚ್ಚಲು ನಿಯಂತ್ರಿಸಲು ಸಾಧ್ಯವಾಗಿದೆ. ಪ್ರಸ್ತುತ ಮುಂಬಯಿ ಮೂಲದ ವನ್ಯಜೀವಿ ಸಂರಕ್ಷಣ ಟ್ರಸ್ಟ್‌ ಈ AI ತಂತ್ರಜ್ಞಾನವನ್ನು ಬಳಸಿಕೊಂಡು ಮಾನವ ಹಾಗೂ ಪ್ರಾಣಿಗಳ ಕಾಳಗವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಅರಣ್ಯ ಗಡಿ ಪ್ರದೇಶದ ರಕ್ಷಣೆ, ವನ್ಯಜೀವಿ ಕಾರಿಡಾರ್‌ ನಿರ್ಮಾಣ ಹಾಗೂ ನಿರ್ವಹಣೆಗಳಲ್ಲಿ ಈ ತಂತ್ರಜ್ಞಾನ ಅತೀ ಹೆಚ್ಚು ಪರಿಣಾಮಕಾರಿಯಾಗಿದೆ. * UN ತನ್ನ ನಿರ್ಣಯದಲ್ಲಿ ಸಾಮಾನ್ಯ ಸಭೆಯು ವನ್ಯಜೀವಿಗಳ ಸ್ವಾಭಾವಿಕ ಮೌಲ್ಯವನ್ನು ಹಾಗೂ ಪರಿಸರ, ಅನುವಂಶಿಕ, ಸಾಮಾಜಿಕ, ಆರ್ಥಿಕ, ವೈಜ್ಞಾನಿಕ, ಶೈಕ್ಷಣಿಕ, ಸಾಂಸ್ಕೃತಿಕ, ಇನ್ನು ಅನೇಕ ಕೊಡುಗೆಗಳನ್ನು ಸಮರ್ಥವಾಗಿದೆ ಎಂದು ಹೇಳಿಕೆ ನೀಡಿದೆ. 2013 ರ ಮಾರ್ಚ. 3 ರಿಂದ 14 ರವರೆಗೆ ಬ್ಯಾಂಕಾಕ್‌ನಲ್ಲಿ ನಡೆದ CITES ಗೆ ಪಕ್ಷಗಳ ಸಮ್ಮೇಳನದ 16 ನೇ ಸಭೆಯಲ್ಲಿ ಮಾರ್ಚ್. 3 ನ್ನು ವಿಶ್ವ ವನ್ಯಜೀವಿ ದಿನ ಎಂದು ಗುರುತಿಸಿ ವಿಶ್ವದ ಕಾಡು ಪ್ರಾಣಿಗಳು ಹಾಗೂ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿರುವ ದಿನವಾಗಿದೆ.