Job Description: * ಇತ್ತೀಚಿಗೆ ವಿಶ್ವಸಂಸ್ಥೆಯು ರಷ್ಯಾ ರಾಷ್ಟ್ರವು ಉಕ್ರೇನ್‌ನ ಮೇಲಿನ ಆಕ್ರಮಣವನ್ನು ಖಂಡಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ. * ಈ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಟ್ಟು 193 ದೇಶಗಳ ಪೈಕಿ 141 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ಆದರೆ ರಷ್ಯಾ, ಬೆಲರೂಸ್‌ ಎರಿಟ್ರಿಯಾ, ಉತ್ತರ ಕೊರಿಯಾ, ಸಿರಿಯಾ. ಈ '5' ದೇಶಗಳು ವಿಶ್ವಸಂಸ್ಥೆಯ ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. * ಏಷ್ಯಾ ರಾಷ್ಟ್ರಗಳಾಗಿರುವ ಭಾರತ, ಚೀನಾ, ಪಾಕಿಸ್ತಾನ ದೇಶಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ದೂರ ಉಳಿದಿವೆ. * ಇದೀಗ ವಿಶ್ವಸಂಸ್ಥೆಯ ಪ್ರಕಾರ ರಷ್ಯಾ ಈಗಿನಿಂದಲೇ ತನ್ನ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು, ಹಾಗೂ ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಶಾಂತಿಯುತದ ಪರಿಹಾರವನ್ನು ಪಡೆಯಲು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಬೇಕು, ಅಷ್ಟೇ ಅಲ್ಲದೇ ನಾಗರಿಕರಿಗೆ ರಕ್ಷಣೆಯನ್ನು ನೀಡಬೇಕು ಈ ಎಲ್ಲ ಅಂಶಗಳು ವಿಶ್ವಸಂಸ್ಥೆಯ ನಿರ್ಣಯದ ಸಭೆಯಲ್ಲಿ ಉಲ್ಲೇಖ ಮಾಡಲಾಗಿದೆ. * ರಷ್ಯಾ ರಾಷ್ಟ್ರವು ಕೇವಲ ಆಕ್ರಮಣ ಮಾಡುತ್ತಿಲ್ಲ ಜೊತೆಗೆ ನರಮೇಧವೂ ಕೂಡ ಆಗಿದೆ ಎಂದು ಉಕ್ರೇನ್‌ನ ರಾಯಭಾರಿ ಸರ್ಗಿ ಕಿಸ್ಲಿಟ್ಯಾ ಮತದಾನದ ಮೊದಲು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. * * ಯುನೈಟೆಡ್ ನೇಷನ್ಸ್ (UN) : ಅಂತರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಿಕೊಳ್ಳಲು, ರಾಷ್ಟ್ರಗಳ ನಡುವೆ ಸೌಹಾರ್ದವನ್ನು ಬೆಳೆಸಲು ಹಾಗೂ ರಾಷ್ಟ್ರಗಳ ಕಾರ್ಯಗಳನ್ನು ಜಾರಿಗೆ ತರುವ ಕೇಂದ್ರವಾಗಿದೆ. ಇದೊಂದು ಪ್ರಪಂಚದ ಅತಿ ದೊಡ್ಡ ಹಾಗೂ ಅತ್ಯಂತ ಪರಿಚಿತ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. * UN ನ ಪ್ರಧಾನ ಕಛೇರಿಯು ನ್ಯೂಯಾರ್ಕ್ ನಗರದಲ್ಲಿದೆ. ಹಾಗೂ ಜಿನೀವಾ, ನೈರೋಬಿ, ವಿಯೆನ್ನಾ ಮತ್ತು ಹೇಗ್‌ನಲ್ಲಿ ಇತರ ಮುಖ್ಯ ಕಚೇರಿಗಳನ್ನು ಒಳಗೊಂಡಿದೆ. * ಈ ಹಿಂದಿನ ವಿಶ್ವಯುದ್ಧ II ರ ನಂತರ ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವ ಸಲುವಾಗಿ UN ನ್ನು ಸ್ಥಾಪನೆ ಮಾಡಲಾಗಿದೆ. ಈ ಹಿಂದೆ 1945 ರ ಏಪ್ರಿಲ್. 25 ರಂದು 50 ಸರ್ಕಾರಗಳು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಮ್ಮೇಳನವನ್ನು ನಡೆಸಲು ಭೇಟಿಯಾದವು ಹಾಗೂ UN ಚಾರ್ಟರ್ ನ್ನು ರಚನೆ ಮಾಡಲು ಆರಂಭಿಸಿ 1945 ರ ಜೂನ್. 25 ರಂದು ಅಂಗೀಕರಿಸಿ 1945 ರ ಅಕ್ಟೋಬರ್. 24 ರಂದು UN ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಜಾರಿಗೆ ಬಂದಿತು.* UN ಸದಸ್ಯತ್ವವು ಈಗ 193 ಆಗಿದೆ.