Job Description: * ಪ್ರಸ್ತುತ ಭಾರತದಲ್ಲಿನ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೇ ಸುಮಾರು 178 ಕೋಟಿಗೂ ಅಧಿಕವಾಗಿದೆ. ಇದೀಗ ಶೇ. 67 ರಷ್ಟು ನಾಗರಿಕರು ವಿದೇಶಗಳಿಗಿಂತ ಭಾರತದಲ್ಲಿ ತಯಾರಿಸಿರುವ ಕೋವಿಡ್ -19 ಲಸಿಕೆಗಳು ವಿದೇಶಗಳಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಗಳಿಗಿಂತ ಸುರಕ್ಷಿತ ಎಂದು ಸಮೀಕ್ಷೆಯ ಪ್ರಕಾರ ತಿಳಿದು ಬಂದಿದೆ. * ಇತ್ತೀಚಿಗೆ HEAL ಫೌಂಡೇಶನ್ ಜೊತೆಯಾಗಿ ಸೈಜೆನ್ ಗ್ಲೋಬಲ್ ಇನ್‌ಸೈಟ್ಸ್ ಹಾಗೂ ಕನ್ಸಲ್ಟಿಂಗ್ ನಡೆಸಿರುವ INDIA VAX-SCENE ಸಮೀಕ್ಷೆಯುನ್ನು ಪ್ರಸ್ತುತ ಭಾರತದ '9' ಮೆಟ್ರೋ ನಗರಗಳಲ್ಲಿನ ನಾಗರಿಕರಿಂದ ಸುಮಾರು 1,106 ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಲಾಗಿದೆ. ಇವರ ಪ್ರಕಾರ ಭಾರತದಲ್ಲಿನ ಲಸಿಕೆಗಳು ಪರಿಣಾಮಕಾರಿತ್ವ ಹಾಗೂ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದು ತಿಳಿಸಿದ್ದಾರೆ. * ಈ ಸಮೀಕ್ಷೆಯ ಪ್ರಕಾರ 98 ಪ್ರತಿಶತ ಜನರು ಭಾರತದಲ್ಲಿನ ಕೋವಿಡ್ -19 ಲಸಿಕೆಗಳ ಬಗ್ಗೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಹಾಗೂ ಇದೇ ಸಮೀಕ್ಷೆಯು ಪ್ರಕಾರ ಶೇ. 78-79 ರಷ್ಟು ಜನರು ಮುಂಬರುವ 2 ರಿಂದ 5 ವರ್ಷಗಳಲ್ಲಿ ನಮ್ಮ ಜೀವನವು ಸಹಜ ಸ್ಥಿತಿಗೆ ಮರಳಿದೆ ಎಂದು ಆಶಯವನ್ನು ವ್ಯಕ್ತ ಪಡಿಸಿದ್ದಾರೆ. * ಭಾರತ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ ಎಂದು ಭಾರತೀತ ಶೇ. 71 ರಷ್ಟು ಜನರು ನಂಬಿಕೆಯನ್ನು ಇಟ್ಟಿದ್ದಾರೆ ಎಂದು ಈ ಸಮೀಕ್ಷೆಯು ವರದಿ ಮಾಡಿದೆ. ಹಾಗೂ ವಿಶ್ವ ಆರೋಗ್ಯ ಸಂಸ್ಥೆ (WHO), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಆರೋಗ್ಯ ಸೇವೆ ನೀಡುವವರು ಪ್ರಧಾನ ಮಂತ್ರಿ ಹಾಗೂ AIIMS, ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. * ಸಾಂಕ್ರಾಮಿಕ ರೋಗವು ಮಕ್ಕಳ ಮೇಲೆ ಪರಿಣಾಮ ಬೀರಿದೆ. ಮಕ್ಕಳು ತರಗತಿ, ಶಾಲೆ ಅಥವಾ ಕಾಲೇಜು ಚಟುವಟಿಕೆಗಳನ್ನು ಹೆಚ್ಚಾಗಿ ತಪ್ಪಿಸಿಕೊಂಡಿದ್ದಾರೆ. ಮಕ್ಕಳ ಒಟ್ಟಾರೆಯಾಗಿ ಸಾಂಕ್ರಾಮಿಕ ಸಮಯದಲ್ಲಿ ಶಿಕ್ಷಣದ ಬಗ್ಗೆ ನಷ್ಟವನ್ನು ಅನುಭವಿಸಿದ್ದಾರೆ.